ಐಎಂಎ ವಂಚನೆ ಪ್ರಕರಣ: ಅಡೋನಿ ಇನ್ಫ್ರಾಸ್ಟ್ರಕ್ಚರ್ಸ್‌ ಸಂಸ್ಥೆಯ 4.62 ಕೋಟಿ ಮುಟ್ಟುಗೋಲು

Update: 2019-07-20 15:01 GMT

ಬೆಂಗಳೂರು, ಜು.20: ಐಎಂಎ ವಂಚನೆ ಪ್ರಕರಣ ಸಂಬಂಧ ಶೋಧ ಕಾರ್ಯ ಮುಂದುವರೆಸಿರುವ ಸಿಟ್ ತನಿಖಾಧಿಕಾರಿಗಳು, ಅಡೋನಿ ಇನ್ಫ್ರಾಸ್ಟ್ರಕ್ಚರ್ಸ್‌ ಸಂಸ್ಥೆಯಿಂದ 4.62 ಕೋಟಿ ರೂ. ಹಣ ಮುಟ್ಟುಗೋಲು ಹಾಕಿಕೊಂಡಿದೆ.

ಐಎಂಎ ಸಂಸ್ಥೆಯು ಅಡೋನಿ ಇನ್ಫ್ರಾಸ್ಟ್ರಕ್ಚರ್ಸ್‌ ಎಂಬ ಸಂಸ್ಥೆಯ ಸಹಭಾಗಿತ್ವದೊಂದಿಗೆ ಬೆಂಗಳೂರಿನಲ್ಲಿ ಮೇಲ್ಸೇತುವೆ(ಫ್ಲೈ ಓವರ್) ನಿರ್ಮಾಣ ಕಾಮಗಾರಿ ಪಡೆಯಲು ಕರಾರು ಮಾಡಿಕೊಂಡಿದ್ದರು ಎನ್ನಲಾಗಿದೆ. ಈ ಸಂಬಂಧ ಐಎಂಎ ಸಂಸ್ಥೆಯು ಅಡೋನಿ ಸಂಸ್ಥೆಗೆ ಹಣ ವರ್ಗಾವಣೆ ಮಾಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ 4.62 ಕೋಟಿ ರೂ. ನಗದನ್ನು ಸಿಟ್ ತಂಡವು ಮುಟ್ಟುಗೋಲು ಹಾಕಿಕೊಂಡು ತನಿಖೆ ಮುಂದುವರೆಸಿದೆ.

ಬೆಳ್ಳಿ ನಾಣ್ಯ: ಅದೇ ರೀತಿ, ನಗರದ ಇನ್‌ಫ್ಯಾಂಟ್ರಿ ರಸ್ತೆಯಲ್ಲಿರುವ ಮಲ್ಬರಿ ಸೂಪರ್ ಮಾರ್ಕೆಟ್ ಪ್ರಧಾನ ಕಚೇರಿಯ ಮೇಲೆ ಶನಿವಾರ ದಾಳಿ ನಡೆಸಿರುವ ಸಿಟ್ ತನಿಖಾಧಿಕಾರಿಗಳು, 5 ಗ್ರಾಂ ತೂಕದ ಬರೋಬ್ಬರಿ 300 ಬೆಳ್ಳಿ ನಾಣ್ಯಗಳು, 52 ಸಾವಿರ ನಗದು, ಸೇರಿ ಇನ್ನಿತರೆ ವಸ್ತುಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News