ಸೌದಿಗೆ 1.48 ಬಿಲಿಯ ಡಾಲರ್ ಮೊತ್ತದ ಕ್ಷಿಪಣಿ

Update: 2019-07-20 17:14 GMT

ವಾಶಿಂಗ್ಟನ್, ಜು. 20: ಸೌದಿ ಅರೇಬಿಯಕ್ಕಾಗಿ ‘ತಾಡ್’ ಕ್ಷಿಪಣಿ ವ್ಯವಸ್ಥೆಯನ್ನು ತಯಾರಿಸುವುದಕ್ಕಾಗಿ ಅಮೆರಿಕದ ಕಂಪೆನಿ ಲಾಕ್‌ಹೀಡ್ ಮಾರ್ಟಿನ್‌ಗೆ 1.48 ಬಿಲಿಯ ಡಾಲರ್ (ಸುಮಾರು 10,200 ಕೋಟಿ ರೂಪಾಯಿ) ಮೊತ್ತದ ಗುತ್ತಿಗೆಯನ್ನು ನೀಡಲಾಗಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಶುಕ್ರವಾರ ಹೇಳಿದೆ.

ಇದರೊಂದಿಗೆ ಸೌದಿ ಅರೇಬಿಯಕ್ಕೆ ಶಸ್ತ್ರಾಸ್ತ್ರ ಪೂರೈಸುವುದಕ್ಕಾಗಿ ಈ ಕಂಪೆನಿಗೆ ಲಭಿಸಿರುವ ಕರಾರಿನ ಒಟ್ಟು ಮೊತ್ತ 5.36 ಬಿಲಿಯ ಡಾಲರ್ (ಸುಮಾರು 37,000 ಕೋಟಿ ರೂಪಾಯಿ)ಗೆ ಏರಿದೆ.

ಸೌದಿ ಅರೇಬಿಯಕ್ಕೆ 44 ತಾಡ್ ಕ್ಷಿಪಣಿ ಲಾಂಚರ್‌ಗಳು, ಕ್ಷಿಪಣಿಗಳು ಮತ್ತು ಸಂಬಂಧಿತ ಉಪಕರಣಗಳನ್ನು ಮಾರಾಟ ಮಾಡುವ ಒಪ್ಪಂದಕ್ಕೆ ಅಮೆರಿಕ ಮತ್ತು ಸೌದಿ ಅರೇಬಿಯದ ಅಧಿಕಾರಿಗಳು 2018ರ ನವೆಂಬರ್‌ನಲ್ಲಿ ಸಹಿ ಹಾಕಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News