ಬೀಫ್ ಸೂಪ್ ಸೇವನೆಯ ಫೋಟೊ ಪೋಸ್ಟ್: ಹಲ್ಲೆಗೊಳಗಾದ ವ್ಯಕ್ತಿಯ ಬಂಧನ

Update: 2019-07-21 14:44 GMT

ಚೆನ್ನೈ,ಜು.21: ಸಾಮಾಜಿಕ ಮಾಧ್ಯಮದಲ್ಲಿ ಬೀಫ್ ಸೂಪ್ ಸೇವಿಸುವ ಫೋಟೊ ಪೋಸ್ಟ್ ಮಾಡಿದ ಕಾರಣಕ್ಕೆ ಗುಂಪಿನಿಂದ ಹಲ್ಲೆಗೊಳಗಾಗಿದ್ದ 24ರ ಹರೆಯದ ವ್ಯಕ್ತಿಯನ್ನು ರವಿವಾರ ಆತ ಆಸ್ಪತ್ರೆಯಿಂದ ಹೊರಬರುತ್ತಿರುವಂತೆಯೇ ಪೊಲೀಸರು ಬಂಧಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬೀಫ್ ಸೂಪ್ ಸೇವನೆ ಮಾಡಿದ ಮುಹಮ್ಮದ್ ಫೈಸಾನ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಪೊಲೀಸರು ಈಗಾಗಲೇ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ. ಜುಲೈ 11ರಂದು ಪೊರವಚೆರಿ ಗ್ರಾಮದಲ್ಲಿರುವ ಫೈಸಾನ್‌ನ ಮನೆಗೆ ತೆರಳಿದ ಜನರ ಗುಂಪು ಆತನ ಜೊತೆ ವಾಗ್ವಾದ ನಡೆಸಿ ನಂತರ ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡ ಫೈಸಾನ್‌ನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಫೈಸಾನ್ ಹಾಗೂ ಇತರರ ವಿರುದ್ಧ ಶಾಂತಿ ಮತ್ತು ಕೋಮು ಸೌಹಾರ್ದ ಕದಡಲು ಪ್ರಯತ್ನ ನಡೆಸಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News