ಬೆಂಗಳೂರು: ​2 ದಿನಗಳ ನಿಷೇಧಾಜ್ಞೆ ಜಾರಿ ವಾಪಸ್

Update: 2019-07-24 10:06 GMT

ಬೆಂಗಳೂರು : ಇತ್ತೀಚಿನ ರಾಜಕೀಯ ವಿದ್ಯಮಾನಗಳ ಹಿನ್ನೆಲೆ ಎರಡು ದಿನಗಳ ಕಾಲ ಬೆಂಗಳೂರು ವ್ಯಾಪ್ತಿಯಲ್ಲಿ ಜಾರಿಗೊಳಿಸಿದ್ದ ನಿಷೇಧಾಜ್ಞೆ ವಾಪಸ್ಸು ಪಡೆಯಲಾಗಿದೆ.

ಗುರುವಾರ ಸಂಜೆ 6 ಗಂಟೆಯವರೆಗೆ ನಗರ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲೆಂದು ಸಿಆರ್ ಪಿಸಿ 144ನೆ ಸೆಕ್ಷನ್ ಜಾರಿ ಮಾಡಿದ್ದು, ಎರಡು ದಿನ ನಿಷೇಧಾಜ್ಞೆ ಹಾಕಲಾಗಿತ್ತು.

ಜೊತೆಗೆ ನಗರದ ಎಲ್ಲ ಮದ್ಯದಂಗಡಿ, ಪಬ್ ಬಂದ್ ಮಾಡಲಾಗಿತ್ತು. ಆದರೆ, ಸದ್ಯ ಯಾವುದೇ ಅಹಿತಕರ ಘಟನೆ ನಡೆಯದ ಹಿನ್ನಲೆ ನಿಷೇಧಾಜ್ಞೆ ವಾಪಾಸ್ಸು ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News