ಐಎಂಎ ಹಗರಣ: ಮನ್ಸೂರ್ ಜತೆ 15 ರಾಜಕಾರಣಿಗಳ ನಂಟು?

Update: 2019-07-29 03:45 GMT

ಬೆಂಗಳೂರು ಜು.29: ಐಎಂಎ (ಐ ಮಾನಿಟರಿ ಅಡ್ವೈಸರಿ) ಬಹುಕೋಟಿ ವಂಚನೆ ಪ್ರಕರಣದ ರೂವಾರಿ ಮುಹಮ್ಮದ್ ಮನ್ಸೂರ್ ಖಾನ್ ಜತೆ ಹಣಕಾಸು ವ್ಯವಹಾರ ನಡೆಸಿದ 15 ಮಂದಿ ರಾಜಕಾರಣಿಗಳ ಹೆಸರು ಪತ್ತೆಯಾಗಿದೆ. ಖಾನ್‌ನಿಂದ ವಶಪಡಿಸಿಕೊಂಡ ಲ್ಯಾಪ್‌ಟಾಪ್‌ನಲ್ಲಿ ಈ ಹೆಸರುಗಳು ಇವೆ ಎಂದು ಕಾನೂನು ಜಾರಿ ನಿರ್ದೇಶನಾಲಯದ ಮೂಲಗಳು ಖಚಿತಪಡಿಸಿವೆ ಎಂದು 'ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್' ವರದಿ ಮಾಡಿದೆ.

ಆದರೆ ಹೆಸರುಗಳನ್ನು ಬಹಿರಂಗಪಡಿಸಲು ನಿರಾಕರಿಸಿವೆ. ಈಗ ಲಭ್ಯವಿರುವ ಪುರಾವೆ, ಆತ ನೀಡಿದ ಹೇಳಿಕೆ ಮತ್ತು ಲ್ಯಾಪ್‌ಟಾಪ್‌ನಲ್ಲಿ ದೊರೆತ ಹೆಸರುಗಳನ್ನು ತಾಳೆ ಮಾಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

"ನಿರ್ದೇಶನಾಲಯ ಕೆಲ ಪ್ರಮುಖ ಹೆಸರುಗಳು ಹಾಗೂ ಹಣಕಾಸು ವ್ಯವಹಾರದ ಗಾತ್ರವನ್ನು ಪತ್ತೆ ಮಾಡಿದೆ. ವಶಪಡಿಸಿಕೊಳ್ಳಲಾದ ಹಾರ್ಡ್‌ಡಿಸ್ಕ್‌ನಲ್ಲಿ ಪ್ರಮುಖ ದಾಖಲೆಗಳು ಹಾಗೂ ಭಾವಚಿತ್ರಗಳು ಇವೆ" ಎಂದು ಮೂಲಗಳು ದೃಢಪಡಿಸಿವೆ.

ತನ್ನ ನಂಬಿಕೆಯ ವ್ಯಕ್ತಿಯೊಬ್ಬನ ಹೆಸರಿನಲ್ಲಿ ಮನ್ಸೂರ್ 6.5 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾನೆ. ಬೆಂಗಳೂರು ಮೂಲದ, ದುಬೈನಲ್ಲಿ ನೆಲೆಸಿರುವ ಅಬ್ಬಾಸ್ ಎಂಬ ವ್ಯಕ್ತಿ ತನ್ನ ವಾಸಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದನ್ನು ಮನ್ಸೂರ್ ಹೇಳಿದ್ದಾನೆ. ಅಬ್ಬಾಸ್ ಹೆಸರಿನಲ್ಲಿ ಹಲವು ಕೋಟಿ ರೂಪಾಯಿಗಳನ್ನು ಮನ್ಸೂರ್ ಹೂಡಿಕೆ ಮಾಡಿದ್ದಾನೆ ಎನ್ನಲಾಗಿದೆ. ಈ ಸ್ವತ್ತನ್ನು ಕೂಡಾ ಸದ್ಯದಲ್ಲೇ ವಶಪಡಿಸಿಕೊಳ್ಳಲಾಗುವುದು ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News