ಐಎಂಎ ವಂಚನೆ ಪ್ರಕರಣ: ಜು.31ಕ್ಕೆ ರೋಶನ್ ಬೇಗ್-ಝಮೀರ್ ಅಹ್ಮದ್ ವಿಚಾರಣೆ

Update: 2019-07-29 15:57 GMT

ಬೆಂಗಳೂರು, ಜು.29: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಜು.31ರಂದು ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವರಾದ ರೋಶನ್ ಬೇಗ್, ಝಮೀರ್ ಅಹ್ಮದ್ ಖಾನ್ ಅವರಿಗೆ ಸಿಟ್ ತನಿಖಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಸೋಮವಾರ ಎಸ್‌ಐಟಿ ತನಿಖಾಧಿಕಾರಿಗಳು ಮಾಜಿ ಸಚಿವರಿಬ್ಬರಿಗೂ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಆದರೆ, ಸೋಮವಾರ ವಿಧಾನಸಭೆ ಅಧಿವೇಶನದ ಹಿನ್ನೆಲೆಯಲ್ಲಿ ಜು.31ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಿಟ್ ಸೂಚಿಸಿದೆ.

ಈಡಿ ವಿಚಾರಣೆ: ಮತ್ತೊಂದೆಡೆ ಈಡಿ ಅಧಿಕಾರಿಗಳು ಆರೋಪಿ ಮನ್ಸೂರ್ ಖಾನ್ ವಿಚಾರಣೆ ಮುಂದುವರೆಸಿದ್ದು, ಆತ ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News