ಐಟಿ ಇಲಾಖೆಯಿಂದ ಜನರಿಗೆ ಕಿರುಕುಳ: ಎಚ್.ಡಿ.ಕುಮಾರಸ್ವಾಮಿ

Update: 2019-07-30 15:19 GMT

ಬೆಂಗಳೂರು, ಜು.30: ಆದಾಯ ತೆರಿಗೆ ಇಲಾಖೆ(ಐಟಿ)ಯ ಅಧಿಕಾರಿಗಳು ಜನರಿಗೆ ಕಿರುಕುಳ ನೀಡುತ್ತಿದ್ದಾರೆ. ಅವರಿಗೆ ಏನು ಬೇಕು ಅನ್ನೋದು ಗೊತ್ತಿಲ್ಲ. ತಮ್ಮ ಕಚೇರಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಾಯ ತೆರಿಗೆ ಇಲಾಖೆಯವರು ಜರುಗಿಸುವ ಕಾನೂನು ಕ್ರಮಗಳು ವಿಭಿನ್ನವಾಗಿವೆ. ತನಿಖೆಗಳನ್ನು ನಡೆಸಲು ಅವರಿಗೆ ಅಧಿಕಾರವಿದೆ. ಆದರೆ, ದಿನನಿತ್ಯದ ಸಮಸ್ಯೆಗಳಿಂದ ಹೊರ ಬರಲು ಜನರಿಗೆ ಅವಕಾಶ ನೀಡಬೇಕು ಎಂದರು.

ಸಿದ್ಧಾರ್ಥ್ ನಾಪತ್ತೆಯಾಗಿರುವ ಸುದ್ದಿ ಕೇಳುತ್ತಿದ್ದಂತೆ ಆಘಾತವಾಯಿತು. ಹಲವಾರು ಸಮಸ್ಯೆಗಳನ್ನು ಎದುರಿಸಿ ಸಾವಿರಾರು ಜನ ಗ್ರಾಮೀಣ ಪ್ರದೇಶದವರು ತಮ್ಮ ಜೀವನ ರೂಪಿಸಿಕೊಳ್ಳಲು ಸಿದ್ಧಾರ್ಥ್ ನೆರವು ನೀಡಿದ್ದರು ಎಂದು ಕುಮಾರಸ್ವಾಮಿ ಹೇಳಿದರು.

ಸುಮಾರು ಎಳು ತಿಂಗಳ ಹಿಂದೆ ಸಿದ್ಧಾರ್ಥ್‌ರನ್ನು ನಾನು ಭೇಟಿಯಾಗಿದ್ದೆ. ಈ ವೇಳೆ ಆದಾಯ ತೆರಿಗೆ ಇಲಾಖೆಯವರು ನಡೆಸುತ್ತಿರುವ ದಾಳಿಗಳ ಬಗ್ಗೆ ಮಾತನಾಡಿದೆವು. ಆದರೆ, ಅವರು ಯಾರೊಬ್ಬರ ವಿರುದ್ಧ ಆರೋಪ ಮಾಡಲಿಲ್ಲ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News