ಕಾಶ್ಮೀರ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಆದೇಶ: ಸಿಬಿಐ ತನಿಖೆಗೆ ಒಮರ್ ಅಬ್ದುಲ್ಲಾ ಆಗ್ರಹ

Update: 2019-07-30 17:21 GMT

ಶ್ರೀನಗರ, ಜು. 30: ಕಳೆದ ನಾಲ್ಕು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಕಾಶ್ಮೀರದ ಕುರಿತ ‘ನಕಲಿ ಆದೇಶ’ದ ಕುರಿತು ಸಿಬಿಐ ತನಿಖೆ ನಡೆಸುವಂತೆ ನ್ಯಾಶನಲ್ ಕಾನ್ಫರೆನ್ಸ್‌ನ ನಾಯಕ ಒಮರ್ ಅಬ್ದುಲ್ಲಾ ಮಂಗಳವಾರ ಆಗ್ರಹಿಸಿದ್ದಾರೆ.

ಜಮ್ಮು ಹಾಗೂ ಕಾಶ್ಮೀರದಲ್ಲಿ ಜನರಿಗೆ ವಾಸಿಸುವ ಹಾಗೂ ಉದ್ಯೋಗ ಪಡೆಯುವ ವಿಶೇಷ ಹಕ್ಕು ಒದಗಿಸುವ ಸಂವಿಧಾನದ ಕಲಂ 35-ಎಯನ್ನು ಕೇಂದ್ರ ಸರಕಾರ ರದ್ದುಗೊಳಿಸುವ ಸಾಧ್ಯತೆ ಇದೆ ಎಂಬ ವದಂತಿ ಸಾಮಾಜಿಕ ಮಾಧ್ಯಮದಲ್ಲಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದೆ. ‘‘ಇದು ರಾಜ್ಯಪಾಲರು ಎತ್ತಿದ ಅತಿ ಗಂಭೀರ ವಿಚಾರ. ಸರಕಾರದ ಹಿರಿಯ ಅಧಿಕಾರಿಗಳ ಸಹಿ ಇರುವ ನಕಲಿ ಆದೇಶ ಹರಿದಾಡುತ್ತಿದೆ. ಇದು ತೇಲಿಸುವಂತಹ ವಿಚಾರ ಅಲ್ಲ. ಈ ನಕಲಿ ಆದೇಶ ಹಾಗೂ ಅದರ ಮೂಲದ ಬಗ್ಗೆ ತನಿಖೆ ನಡೆಸುವಂತೆ ಸಿಬಿಐಯಲ್ಲಿ ಆಗ್ರಹಿಸಬೇಕು’’ ಎಂದು ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಮಾದ್ಯಮದಲ್ಲಿ ಹರಿದಾಡುತ್ತಿರುವ ಆದೇಶ ಸಾಚಾ ಅಲ್ಲ ಎಂದು ರಾಜ್ಯಪಾಲ ಸತ್ಯಪಾಲ್ ಮಲಿಕ್ ಪ್ರತಿಪಾದಿಸಿದ ಬಳಿಕ ಉಮ್ಮರ್ ಅಬ್ದುಲ್ಲಾ ಈ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಕಾಣಿಸಿಕೊಂಡ ಆದೇಶದ ಬಗ್ಗೆ ಪ್ರಶ್ನಿಸಿದಾಗ ‘‘ಇಲ್ಲಿ ಹಲವು ವದಂತಿಗಳು ಹರಡುತ್ತಿವೆ. ಅದಕ್ಕೆ ಯಾವುದೇ ಪ್ರಾಮುಖ್ಯತೆ ನೀಡಬೇಡಿ. ಪ್ರತಿಯೊಂದು ಚೆನ್ನಾಗಿದೆ. ಎಲ್ಲವೂ ಸಹಜ ಸ್ಥಿತಿಯಲ್ಲಿ ಇದೆ’’ ಎಂದು ಮಲಿಕ್ ಪ್ರತಿಪಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News