ಜಮ್ಮು –ಕಾಶ್ಮೀರದಿಂದ ಲಡಾಖ್ ವಿಭಜನೆ; ಕೇಂದ್ರಾಡಳಿತ ಸ್ಥಾನಮಾನ

Update: 2019-08-05 06:46 GMT
Photo: RSTV

ಶ್ರೀನಗರ, ಆ.5: ಜಮ್ಮು ಮತ್ತು ಕಾಶ್ಮೀರದಿಂದ ಲಡಾಖ್ ನ್ನು ವಿಭಜಿಸಲಾಗಿದ್ದು, ಇನ್ನು ಮುಂದೆ ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಲಿದೆ. ಆದರೆ ಅಲ್ಲಿ ವಿಧಾನಸಭೆ ಇರುವುದಿಲ್ಲ.

ಕೇಂದ್ರಾಡಳಿತ ಪ್ರದೇಶಕ್ಕೆ ಒಳಪಡಲಿರುವ ಜಮ್ಮು-ಕಾಶ್ಮೀರದಲ್ಲಿ ವಿಧಾನಸಭೆ  ಇರಲಿದೆ ಎಂದು ರಾಜ್ಯ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದಾರೆ.

 ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾದ  370ನೇ ವಿಧಿ  ರದ್ದುಪಡಿಸುವ ನಿರ್ಧಾರವನ್ನು ರಾಜ್ಯಸಭೆಯಲ್ಲಿ  ವಿಪಕ್ಷಗಳ ಗದ್ದಲದ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಕಟಿಸಿದರು.  

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಇಲ್ಲ.  ಇಷ್ಟುದಿನ ದೇಶಕ್ಕೆ ಅನ್ವಯಿಸಿದ ಎಲ್ಲ ಕಾನೂನುಗಳು ಜಮ್ಮು ಕಾಶ್ಮೀರಕ್ಕೂ ಇನ್ನು   ಅನ್ವಯಿಸುತ್ತದೆ, ಜಮ್ಮು ಮತ್ತು  ಕಾಶ್ಮೀರದ ಹೊರಗಿನ ಜನರು ಇನ್ನು ಅಲ್ಲಿನ ಭೂಮಿಯನ್ನು ಖರೀದಿಸಬಹುದು. ಹೊರಗಿನವರು ಅಲ್ಲಿ ನೆಲಸಬಹುದು ಎಂದು ಅಮಿತ್ ಶಾ ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News