ಬಂಧನದಲ್ಲಿರುವ ಮೆಹಬೂಬಾ ಮುಫ್ತಿಗೆ ಮಗಳೊಂದಿಗೆ ಮಾತನಾಡಲು ಅವಕಾಶ ನಿರಾಕರಣೆ

Update: 2019-08-06 18:56 GMT

 ಶ್ರೀನಗರ, ಆ.೭: ಸರಕಾರಿ ಗೆಸ್ಟ್ ಹೌಸ್‌ನಲ್ಲಿ ಬಂಧನದಲ್ಲಿರುವ  ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯ ಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಭೇಟಿಯಾಗಿ ಮಾತನಾಡಲು  ಮಗಳಿಗೂ ಅವಕಾಶ ನಿರಾಕರಿಸಲಾಗಿದೆ.

ಮೆಹಬೂಬಾ ಮುಫ್ತಿ ಅವರನ್ನು ರವಿವಾರ  ಮಧ್ಯರಾತ್ರಿ ಅವರ ಮನೆಯಿಂದ ವಶಕ್ಕೆ ಪಡೆಯಲಾಗಿದ್ದು, ಅವರನ್ನು ಸರಕಾರಿ ಗೆಸ್ಟ್‌ ಹೌಸ್ಟ್‌ ನಲ್ಲಿ ಬಂಧನದಲ್ಲಿರಿಸಲಾಗಿದೆ.

" ನನ್ನ ತಾಯಿಯನ್ನು ಪೊಲೀಸರು ವಶಕ್ಕೆ ಪಡೆದು ಸರಕಾರಿ ಗೆಸ್ಟ್‌ ಹೌಸ್‌ ನಲ್ಲಿ ಬಂಧನದಲ್ಲಿರಿಸಿದ್ದಾರೆ. ಅವರೊಂದಿಗೆ ಸಂಪರ್ಕದಲ್ಲಿರಲು ನಮಗೆ ಅವಕಾಶ ನಿರಾಕರಿಸಲಾಗಿದೆ. ಅವರನ್ನು ಭೇಟಿಯಾಗಿ  ಮಾತನಾಡಲು  ಅವಕಾಶ ನೀಡಲಾಗಿಲ್ಲ.  ಎಲ್ಲ ದೂರವಾಣಿ ಸಂಪರ್ಕಗಳನ್ನು ಕಡಿತಗೊಳಿಸಿದ ಕಾರಣದಿಂದಾಗಿ ಅವರೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ” ಎಂದು ಅವರ ಮಗಳು ಇಲ್ತಿಜಾ ಜಾವೇದ್‌ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News