ಕಾಶ್ಮೀರದ ಮಹಿಳೆಯರು, ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕವಿದೆ: ಮಲಾಲಾ ಟ್ವೀಟ್

Update: 2019-08-08 08:58 GMT

ಹೊಸದಿಲ್ಲಿ, ಆ.8: ಕೇಂದ್ರ ಸರಕಾರ ಕಾಶ್ಮೀರದ ವಿಶೇಷ ಸ್ಥಾನಮಾನ ಹಾಗೂ ರಾಜ್ಯ ಸ್ಥಾನಮಾನವನ್ನು ರದ್ದುಗೊಳಿಸಿ ಅಲ್ಲಿ ಭದ್ರತಾ ಕ್ರಮಗಳು ಹಾಗೂ ನಿರ್ಬಂಧಗಳನ್ನು ಹೇರಿರುವ ಹಿನ್ನೆಲೆಯಲ್ಲಿ ಕಾಶ್ಮೀರಿ ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಯ ಬಗ್ಗೆ ನೋಬೆಲ್ ಶಾಂತಿ ಪ್ರಶಸ್ತಿ ವಿಜೇತ ಹೋರಾಟಗಾರ್ತಿ ಮಲಾಲಾ ಯೂಸುಫ್ ಝಾಯಿ ತಮ್ಮ ಆತಂಕ ತೋಡಿಕೊಂಡಿದ್ದಾರೆ.

“ನನ್ನ ಹೆತ್ತವರು ಚಿಕ್ಕವರಾಗಿದ್ದಂದಿನಿಂದ ಹಾಗೂ ನನ್ನ ಅಜ್ಜ ಅಜ್ಜಿ ಯುವಕರಾಗಿದ್ದ ದಿನದಿಂದ ಕಾಶ್ಮೀರದ ಜನರು  ಸಂಘರ್ಷಮಯ ಸ್ಥಿತಿಯಲ್ಲಿಯೇ ಜೀವಿಸುತ್ತಿದ್ದಾರೆ'' ಎಂದು ಮಲಾಲ ಟ್ವೀಟ್ ಮಾಡಿದ್ದಾರೆ.

“ಸಂಘರ್ಷದಲ್ಲಿ  ಹೆಚ್ಚು ಸಮಸ್ಯೆಗೆ ತುತ್ತಾಗುವವರು ಮಹಿಳೆಯರು ಮತ್ತು ಮಕ್ಕಳಾಗಿರುವುದರಿಂದ  ಕಾಶ್ಮೀರಿ ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕವಿದೆ'' ಎಂದು ಮಲಾಲಾ ತಮ್ಮ ಟ್ವೀಟ್ ನಲ್ಲಿ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News