ಅಭಿನಂದನ್ ಜೆಟ್ ‘ಪತನ’ಗೊಳಿಸಿದ್ದ ಇಬ್ಬರು ಪೈಲಟ್‌ಗಳಿಗೆ ಪಾಕ್ ಶೌರ್ಯ ಪ್ರಶಸ್ತಿ

Update: 2019-08-15 17:37 GMT

ಇಸ್ಲಾಮಾಬಾದ್, ಆ.15: ಕಳೆದ ಫೆಬ್ರವರಿಯಲ್ಲಿ ಬಾಲಕೋಟ್ ಮೇಲೆ ಭಾರತ ನಡೆಸಿದ ವಾಯು ದಾಳಿಯ ಬಳಿಕ ನಡೆದ ಯುದ್ಧವಿಮಾನಗಳ ಸಂಘರ್ಷದ ವೇಳೆ ಶೌರ್ಯವನ್ನು ಪ್ರದರ್ಶಿಸಿದ ತನ್ನ ವಾಯುಪಡೆಯ ಇಬ್ಬರು ಪೈಲಟ್‌ಗಳಿಗೆ ಅತ್ಯುನ್ನತ ಮಿಲಿಟರಿ ಪುರಸ್ಕಾರಗಳನ್ನು ನೀಡವುದಾಗಿ ಪಾಕಿಸ್ತಾನವು ಬುಧವಾರ ಪ್ರಕಟಿಸಿದೆ.

ಫೆಬ್ರವರಿ 27ರಂದು ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಚಲಾಯಿಸುತ್ತಿದ್ದ ಭಾರತೀಯ ವಾಯುಪಡೆಯ ವಿಮಾನವನ್ನು ‘ಹೊಡೆದುರುಳಿಸಿದ’ ವಿಂಗ್‌ಕಮಾಂಡರ್‌ ಮುಹಮ್ಮದ್ ನೌಮಾನ್ ಅವರಿಗೆ ಸಿತಾರೆ ಜುರಾತ್ ಪ್ರಶಸ್ತಿ ಹಾಗೂ ಸ್ಕ್ವಾಡ್ರನ್ ಲೀಡರ್ ಹಸನ್ ಮುಹಮ್ಮದ್ ಸಿದ್ದೀಕಿ ಅವರಿಗೆ ‘ತಮ್‌ೆ ಶುಜಾತ್’ ಪುರಸ್ಕಾರವನ್ನು ಪ್ರದಾನ ಮಾಡಲಾಗುವುದು ಎಂದು ಪಾಕ್ ಸೇನೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಬಾಲಕೋಟ್ ವಾಯುದಾಳಿಯ ಬಳಿಕ ಪಾಕ್ ಯುದ್ಧವಿಮಾನಗಳನ್ನು ಹಿಮ್ಮೆಟ್ಟಿಸಿದ ಭಾರತೀಯ ವಾಯುಪಡೆಯ ಪೈಲಟ್ ವಿಂಗ್‌ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ಭಾರತವು ಬುಧವಾರ ವೀರಚಕ್ರ ಪ್ರಶಸ್ತಿ ಘೋಷಿಸಿದ ಬೆನ್ನಲ್ಲೇ ಪಾಕ್ ಈ ಪುರಸ್ಕಾರಗಳನ್ನು ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News