ಇಸ್ರೊ ಅಧ್ಯಕ್ಷ ಸಿವನ್‌ಗೆ ಎ.ಪಿ.ಜೆ. ಅಬ್ದುಲ್ ಕಲಾಂ ಪ್ರಶಸ್ತಿ

Update: 2019-08-15 16:58 GMT

ಚೆನ್ನೈ, ಆ. 15: ಚಂದ್ರಯಾನ-2 ಉಡಾವಣೆಯ ನೇತೃತ್ವ ವಹಿಸಿದ್ದ ಇಸ್ರೋ ಅಧ್ಯಕ್ಷ ಸಿವನ್ ಅವರಿಗೆ ತಮಿಳುನಾಡು ಸರಕಾರ ಗುರುವಾರ ಡಾ. ಎ.ಪಿ.ಜಿ. ಅಬ್ದುಲ್ ಕಲಾಂ ಪ್ರಶಸ್ತಿ ನೀಡಿ ಗೌರವಿಸಿದೆ. ಫೋರ್ಟ್ ಸಂತ ಜಾರ್ಜ್‌ನಲ್ಲಿ ನಡೆದ ಸ್ವಾತಂತ್ರ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಿವನ್ ಅವರು ಗೈರು ಹಾಜರಾಗಿದ್ದರು. ಆದರೆ, ಅವರು ಮುಖ್ಯಮಂತ್ರಿಯವರಿಂದ ಪಡೆದುಕೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಸಿವನ್ ಕನ್ಯಾಕುಮಾರಿ ಜಿಲ್ಲೆಯ ನಿವಾಸಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News