ಭಾರತೀಯ ಕಲಾವಿದರು ಇರುವ ಜಾಹೀರಾತುಗಳಿಗೆ ಪಾಕ್ ಕತ್ತರಿ

Update: 2019-08-16 04:17 GMT

ಇಸ್ಲಾಮಾಬಾದ್, ಆ.16: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಭಾರತದ ನಿರ್ಧಾರಕ್ಕೆ ಪ್ರತಿಭಟನಾರ್ಥವಾಗಿ, ಭಾರತೀಯ ಕಲಾವಿದರು ಇರುವ ಎಲ್ಲ ಜಾಹೀರಾತುಗಳ ಪ್ರಸಾರವನ್ನು ಪಾಕಿಸ್ತಾನ ನಿಷೇಧಿಸಿದೆ.

ಪಾಕಿಸ್ತಾನದ ಎಲೆಕ್ಟ್ರಾನಿಕ್ ಮಾಧ್ಯಮ ನಿಯಂತ್ರಣ ಪ್ರಾಧಿಕಾರ (ಪೆಮ್ರಾ) ಈ ನಿರ್ಧಾರ ಕೈಗೊಂಡಿದ್ದು, ಈ ಸಂಬಂಧ ಆಗಸ್ಟ್ 14ರಂದು ಬಿಡುಗಡೆ ಮಾಡಿರುವ ಆದೇಶವನ್ನು ಎಲ್ಲ ಮಾಧ್ಯಮ ಸಂಸ್ಥೆಗಳಿಗೆ ಕಳುಹಿಸಲಾಗಿದೆ.

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನದ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಅನ್ವಯ, ಎಲ್ಲ ಭಾರತೀಯ ಟಿವಿ ವಾಹಿನಿಗಳ ಅನುಮತಿ ಹಿಂಪಡೆಯಲಾಗಿದೆ ಎಂದೂ ಪೆಮ್ರಾ ಸ್ಪಷ್ಟಪಡಿಸಿದೆ.

ಡೆಟ್ಟಾಲ್ ಸೋಪ್, ಸರ್ಫ್ ಎಕ್ಸೆಲ್, ಪ್ಯಾಂಟೆನ್ ಶ್ಯಾಂಪೂ, ಹೆಡ್ & ಶೋಲ್ಡರ್ ಶ್ಯಾಂಪೂ, ಲೈಫ್‌ಬಾಯ್ ಶ್ಯಾಂಪೂ, ಫಾಗ್ ಬಾಡಿ ಸ್ಪ್ರೇ, ಸನ್‌ಸಿಲ್ಕ್ ಶ್ಯಾಂಪೂ, ಕ್ನೋರ್ ನೂಡಲ್ಸ್, ಸೂಫಿ, ಫೇರ್ & ಲವ್ಲಿ ಫೇಸ್ ವಾಶ್ ಮತ್ತು ಸೇಫ್‌ಗಾರ್ಡ್ ಸೋಪ್ ಜಾಹೀರಾತುಗಳನ್ನು ನಿಷೇಧಿಸಲಾಗಿದೆ.

ಭಾರತೀಯ ಮಾಡೆಲ್‌ಗಳ ಬದಲಾಗಿ ಬೇರೆ ಮಾಡೆಲ್‌ಗಳನ್ನು ಬಳಸಿಕೊಂಡು ಜಾಹೀರಾತು ನೀಡಬಹುದು. ತಪ್ಪಿದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಹುರಾಷ್ಟ್ರೀಯ ಕಂಪೆನಿಗಳಿಗೆ ಎಚ್ಚರಿಕೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News