ತನ್ನ ಶಿಕ್ಷಣಕ್ಕೆ ನೆರವಾಗಲು ರೋಬೊಟ್ ಅಭಿವೃದ್ಧಿಪಡಿಸಿದ 12 ವರ್ಷದ ಮುಹಮ್ಮದ್ ಹಸನ್ ಅಲಿ

Update: 2019-08-17 09:58 GMT

ಹೈದರಾಬಾದ್, ಆ.17: ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿರುವ 12 ವರ್ಷದ ಪೋರನೊಬ್ಬ ತನ್ನ ಬೋಧನೆಗೆ ನೆರವಾಗುವ ಸಲುವಾಗಿ ರೋಬೊಟ್ ಅಭಿವೃದ್ಧಿಪಡಿಸಿ ಸುದ್ದಿಯಲ್ಲಿದ್ದಾನೆ.

12 ವರ್ಷ ವಯಸ್ಸಿನ ಮುಹಮ್ಮದ್ ಹಸನ್ ಅಲಿ ಎಂಟನೇ ತರಗತಿ ವಿದ್ಯಾರ್ಥಿಯಾಗಿದ್ದು, ಸಿವಿಲ್, ಮೆಕ್ಯಾನಿಕಲ್ ಹಾಗೂ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದಾನೆ.

"ನಾನು ಎಂಜಿನಿಯರ್ ‍ಗಳಿಗೆ ಡಿಸೈನಿಂಗ್ ಮತ್ತು ಡ್ರಾಫ್ಟಿಂಗ್ ಹೇಳಿಕೊಡುತ್ತೇನೆ. ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಎಂಬೇಡೆಡ್ ಸಿಸ್ಟಂಗಳ ಬಗ್ಗೆ, ಇಂಟರ್ ನೆಟ್ ಆಫ್ ಥಿಂಕ್ಸ್ ಮತ್ತು ರೊಬೋಟಿಕ್ಸ್ ಬಗ್ಗೆ ಬೋಧಿಸುತ್ತೇನೆ. ನಾನು ನೂರಾರು ಪ್ರಾಜೆಕ್ಟ್‍ ಗಳನ್ನು ಸಿದ್ಧಪಡಿಸಿದ್ದು, ಅವುಗಳ ಬಗ್ಗೆ ಕಾರ್ಯನಿರ್ವಹಿಸುತ್ತಿದ್ದು, ಆಗ ಸೇವಾ ರೋಬೊಟ್ ಕಲ್ಪನೆ ಬಂತು" ಎಂದು ಅಲಿ ವಿವರಿಸುತ್ತಾನೆ.

ಈ ಅದ್ಭುತ ಬಾಲಕ ಕೇವಲ 15 ದಿನಗಳಲ್ಲಿ ರೋಬೊಟ್ ಅಭಿವೃದ್ಧಿಪಡಿಸಿದ್ದು, ಈ ರೋಬೊಟ್, ಧ್ವನಿ ಆದೇಶಗಳನ್ನು ಸ್ವೀಕರಿಸಿ, ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತದೆ ಹಾಗೂ ಇದನ್ನು ಕೂಡಾ ಸ್ವಯಂಚಾಲಿತ ವಿಧಾನದಲ್ಲಿ ನಡೆಸುತ್ತದೆ.

"ಜನರಿಗಾಗಿ ಈ ಯೋಜನೆ ಸೃಷ್ಟಿಸಿದ್ದು, ಇದನ್ನು ರೆಸ್ಟೋರೆಂಟ್ ಹಾಗೂ ಹೋಟೆಲ್‍ಗಳಲ್ಲೂ ಬಳಸಬಹುದು. ಮನೆಗಳಲ್ಲಿ ಹಿರಿಯರಿಗೆ ಊಟ ಬಡಿಸಲೂ ಇದು ನೆರವಾಗಬಲ್ಲದು. ಇದು ಬಿಟೆಕ್ ಹಾಗೂ ಎಂಟೆಕ್ ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್ ಬೋಧನೆಯ ಅಂಗ” ಅಲಿ ವಿವರಿಸಿದ್ದಾನೆ. ದೇಶಕ್ಕಾಗಿ ಏನಾದರೂ ಮಾಡಬೇಕು ಎನ್ನುವುದು ನನ್ನ ಉದ್ದೇಶ ಎಂದು ಹೇಳುತ್ತಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News