ನ್ಯಾಯಲಯಗಳಲ್ಲಿ ಪ್ರಕರಣ ಬಾಕಿಯಿಂದ ಆರ್ಥಿಕ ನಷ್ಟ: ನ್ಯಾ.ವೆಂಕಟಾಚಲಯ್ಯ

Update: 2019-08-17 14:39 GMT

ಬೆಂಗಳೂರು, ಆ.17: ನ್ಯಾಯಲಯಗಳಲ್ಲಿ ನಡೆಯಬೇಕಾದ ಪ್ರಕರಣಗಳ ವಿಚಾರಣೆ ಬಾಕಿ ಉಳಿದರೆ, ಆರ್ಥಿಕ ನಷ್ಟ ಉಂಟಾಗಲಿದೆ ಎಂದು ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಹೇಳಿದರು.

ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಭಾರತೀಯ ಕಾನೂನು ಸಂಶೋಧನಾ ಪ್ರತಿಷ್ಠಾನ ಆಯೋಜಿಸಿದ್ದ, ‘ಕಾನೂನು ನಾಯಕತ್ವ’ ಕುರಿತ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ನಮ್ಮ ದೇಶದಲ್ಲಿ 22 ಸಾವಿರ ಅಧೀನ ನ್ಯಾಯಾಲಯಗಳಿವೆ. ಪ್ರತಿದಿನ ಕನಿಷ್ಠ 120 ದಾವೆದಾರರು ನ್ಯಾಯಾಲಯಗಳಿಗೆ ಭೇಟಿ ನೀಡುತ್ತಾರೆ. ಅವರೊಂದಿಗೆ ಅಷ್ಟೇ ಸಂಖ್ಯೆಯಲ್ಲಿ ವಕೀಲರು ಸಹ ಸಾಕ್ಷಿದಾರರು ಹಾಜರು ಇರುತ್ತಾರೆ. ಆದರೆ, ಹೆಚ್ಚಿನ ಸಮಯ ವಿಳಂಬವಾಗುವುದರಿಂದ ಖಾಲಿ ಕೈಯಿಂದ ಹಿಂತಿರುಗುತ್ತಾರೆ. ಇದು ಮನುಷ್ಯನ ಅಮೂಲ್ಯವಾದ ಸಮಯದ ವ್ಯರ್ಥ ಮಾತ್ರವಲ್ಲದೇ ಆರ್ಥಿಕ ದೃಷ್ಟಿಯಿಂದ ಗಮನಿಸಿದರೆ, ಪ್ರತಿಯೊಬ್ಬ ವ್ಯಕ್ತಿಯು ಕನಿಷ್ಟ 200 ರೂ.ಗಳ ಸಮಂಜಸವಾದ ಮೊತ್ತವನ್ನು ಖರ್ಚು ಮಾಡಿದರೂ ಸಹ ವರ್ಷಕ್ಕೆ 2 ಲಕ್ಷ ಕೋಟಿ ರೂ. ನಷ್ಟವಾಗುತ್ತಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ, ನಿವೃತ್ತ ನ್ಯಾಯಮೂರ್ತಿಗಳಾದ ಟಿ.ಎಸ್.ಠಾಕೂರ್, ಎಂ.ಶಿವರಾಜ್ ಪಾಟೀಲ್ ಸೇರಿದಂತೆ ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News