ಇನ್‌ಸ್ಟಾಗ್ರಾಂ ನಲ್ಲಿ ಬ್ಲ್ಯಾಕ್‌ಮೇಲ್ ಆರೋಪ: ಯುವಕನ ಬಂಧನ

Update: 2019-08-18 13:08 GMT

ಬೆಂಗಳೂರು, ಆ.18: ಯುವತಿ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದು ಯುವಕರನ್ನು ಸ್ನೇಹಿತರನ್ನಾಗಿ ಮಾಡಿಕೊಂಡು, ಅವರ ಖಾಸಗಿ ಚಿತ್ರಗಳನ್ನು ಪಡೆದು, ಬೆದರಿಕೆ ಹಾಕುತ್ತಿದ್ದ ಆರೋಪದಡಿ ಯುವಕನೊರ್ವನನ್ನು ಸೈಬರ್ ಕ್ರೈಂ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕೋಡಿ ಚಿಕ್ಕನಹಳ್ಳಿಯ ಚಂದನ ಯಾನೆ ಬ್ಲಾಕ್‌ಮೇಲ್ (21) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಚಂದನ್, ಹಣದಾಸೆಗಾಗಿ ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದು ಯುವತಿಯರ ಆಕರ್ಷಕ ಭಾವಚಿತ್ರಗಳನ್ನು ಹಾಕಿಕೊಂಡು ಅದರಿಂದ ಯುವಕರ ಸ್ನೇಹ ಬೆಳೆಸಿ, ಅವರಿಂದ ಖಾಸಗಿ ಫೋಟೋಗಳನ್ನು ಸಂಗ್ರಹ ಮಾಡಿ, ಹಣ ಸುಲಿಗೆ ಮಾಡುತ್ತಿದ್ದ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತ ಯುವಕ ನೀಡಿದ ದೂರು ದಾಖಲಿಸಿ ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ಬಳಕೆದಾರರು ಯಾವುದೇ ಪ್ರಚೋದನೆ, ಚಿತಾವಣೆ ಕ್ಷಣಿಕ ಸಂತೋಷದ ಪ್ರಭಾವಕ್ಕೊಳಗಾಗಿ ಖಾಸಗಿ ಕ್ಷಣಗಳ ಭಾವಚಿತ್ರ ದೃಶ್ಯಾವಳಿಗಳನ್ನು ಹಂಚಿಕೊಳ್ಳದಂತೆ ಪೊಲೀಸರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News