ನಟನ ಹೆಸರಿನಲ್ಲಿ ಫೇಸ್‌ಬುಕ್ ನಲ್ಲಿ ವಂಚಿಸುತ್ತಿದ್ದ ಯುವಕನ ಬಂಧನ

Update: 2019-08-18 13:13 GMT

ಬೆಂಗಳೂರು, ಆ.18: ಕನ್ನಡ ಚಲನಚಿತ್ರದ ಹೆಸರು ಮತ್ತು ನಟರ ಭಾವ ಚಿತ್ರ ಬಳಸಿ ನಕಲಿ ಫೇಸ್‌ಬುಕ್ ಖಾತೆಯನ್ನು ತೆರೆದು ಅಸಲಿಯಂತೆ ನಟಿಸಿ ಯುವತಿಯರನ್ನು ಪರಿಚಯಿಸಿಕೊಂಡು, ಸುಲಿಗೆ ಮಾಡುತ್ತಿದ್ದ ಆರೋಪದಡಿ ಯುವಕನೊರ್ವನನ್ನು ಸೈಬರ್ ಕ್ರೈಂ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಸುಂಕದಕಟ್ಟೆಯ ಹೊಯ್ಸಳ ನಗರದ ವೆಂಕಟೇಶ್ (22) ಬಂಧಿತ ಆರೋಪಿ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ತಿಳಿಸಿದ್ದಾರೆ. ಆರೋಪಿಯು ಚಲನಚಿತ್ರ ನಟರ ಹೆಸರಿನಲ್ಲಿ ನಕಲ್ ಫೇಸ್‌ಬುಕ್ ಖಾತೆ ತೆರೆದು ಯುವತಿಯರನ್ನು ಪರಿಚಯಿಸಿಕೊಂಡು ಸಲುಗೆ ಬೆಳೆಸಿಕೊಳ್ಳುತ್ತಿದ್ದ. ನಂತರ ಅವರಿಗೆ ಚಲನಚಿತ್ರದಲ್ಲಿ ಅವಕಾಶ ಕಲ್ಪಿಸಲು ತನ್ನ ಸಹಾಯಕ ವೆಂಕಿರಾವ್ ಎಂಬುವರನ್ನು ಸಂಪರ್ಕಿಸುವಂತೆ ವಾಟ್ಸಾಪ್ ನಂಬರ್ ನೀಡುತ್ತಿದ್ದ.

ನಂತರ ತಾನೇ ವೆಂಕಿರಾವ್ ಹೆಸರಿನಲ್ಲಿ ವಾಟ್ಸಾಪ್ ಮೂಲಕ ಚಾಟಿಂಗ್ ನಡೆಸಿ ಪರಿಚಿತರನ್ನು ಭೇಟಿ ಮಾಡಿ ತಮಗೆ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ 25 ಸಾವಿರ ರೂ.ಗಳನ್ನು ಪಡೆದು ವಂಚಿಸುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ತಮ್ಮ ಹೆಸರನ್ನು ಫೇಸ್‌ಬುಕ್ ಖಾತೆಗೆ ಬಳಸಿದ್ದಾರೆ ಎಂದು ಚಲನಚಿತ್ರ ನಟರೊಬ್ಬರು ನೀಡಿದ್ದ ದೂರು ದಾಖಲಿಸಿ ತನಿಖೆ ಕೈಗೊಂಡ ಸೈಬರ್ ಕ್ರೈಂ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News