17 ಸಚಿವರ ಪಟ್ಟಿ ಅಂತಿಮ: ದ.ಕ. ಜಿಲ್ಲೆಗಿಲ್ಲ ಸಚಿವ ಸ್ಥಾನ

Update: 2019-08-20 06:27 GMT

ಬೆಂಗಳೂರು, ಆ.20: ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರಕಾರದ ಸಚಿವ ಸಂಪುಟ ರಚನೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಸಚಿವರ ಪಟ್ಟಿ ಅಂತಿಮಗೊಂಡಿದೆ.

17 ನೂತನ ಸಚಿವರ ಪಟ್ಟಿ ಸಿದ್ಧಗೊಂಡಿದ್ದು, ಉಡುಪಿಯ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಪಕ್ಷೇತರ ಶಾಸಕ ಎಚ್.ನಾಗೇಶ್ ಕೂಡಾ ಸಚಿವರಾಗಲಿದ್ದಾರೆ. ಆದರೆ ಏಳು ಬಿಜೆಪಿ ಶಾಸಕರನ್ನು ಹೊಂದಿರುವ ದ.ಕ. ಜಿಲ್ಲೆಗೆ ನೂತನ ಸಚಿವ ಸಂಪುಟದಲ್ಲಿ ಸ್ಥಾನ ಲಭಿಸಿಲ್ಲ.

ನೂತನ ಸಚಿವರ ಪಟ್ಟಿ ಇಂತಿವೆ....

1) ಗೋವಿಂದ ಎಂ.ಕಾರಜೋಳ (ದಲಿತ)

2) ಡಾ.ಸಿ.ಎನ್.ಅಶ್ವಥ್ ನಾರಾಯಣ( ಒಕ್ಕಲಿಗ)
3) ಲಕ್ಷ್ಮಣ್ ಸವದಿ (ಲಿಂಗಾಯತ)
4) ಕೆ. ಎಸ್.ಈಶ್ವರಪ್ಪ (ಕುರುಬ)
5) ಆರ್.ಅಶೋಕ್(ಒಕ್ಕಲಿಗ)
 6) ಜಗದೀಶ್ ಶೆಟ್ಟರ್ (ಲಿಂಗಾಯತ)
7) ಬಿ.ಶ್ರೀರಾಮುಲು (ನಾಯಕ ಎಸ್ಟಿ)
8) ಎಸ್.ಸುರೇಶ್ ಕುಮಾರ್(ಬ್ರಾಹ್ಮಣ)
9) ವಿ.ಸೋಮಣ್ಣ (ಲಿಂಗಾಯತ)
10) ಸಿ.ಟಿ.ರವಿ(ಒಕ್ಕಲಿಗ)
11) ಬಸವರಾಜ ಬೊಮ್ಮಾಯಿ (ಲಿಂಗಾಯತ)
12) )ಕೋಟ ಶ್ರೀನಿವಾಸ ಪೂಜಾರಿ(ಬಿಲ್ಲವ)
13) ಜೆ.ಸಿ. ಮಾಧುಸ್ವಾಮಿ (ಲಿಂಗಾಯತ)
14) ಸಿ.ಸಿ.ಪಾಟೀಲ್ (ಲಿಂಗಾಯತ)
15) ಎಚ್.ನಾಗೇಶ್ (ಪಕ್ಷೇತರ, ದಲಿತ)
16) ಪ್ರಭು ಚೌವ್ಹಾಣ್ (ಲಂಬಾಣಿ)
17)ಶಶಿಕಲಾ ಜೊಲ್ಲೆ (ಲಿಂಗಾಯತ)

ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವು ಇಂದು ಬೆಳಗ್ಗೆ 10:30ರಿಂದ 11:30ರೊಳಗೆ ರಾಜಭವನದಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News