ಹೆಚ್ಚುತ್ತಿರುವ ಅಸಹಿಷ್ಣುತೆ, ಧಾರ್ಮಿಕ ಹಿಂಸಾಚಾರದ ಬಗ್ಗೆ ಎಚ್ಚರಿಕೆ ನೀಡಿದ ಮನಮೋಹನ್ ಸಿಂಗ್

Update: 2019-08-20 16:16 GMT

ಹೊಸದಿಲ್ಲಿ, ಆ.20: ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ, ಕೋಮು ಧ್ರವೀಕರಣ ಮತ್ತು ಕೆಲವು ಗುಂಪುಗಳಿಂದ ನಡೆಯುತ್ತಿರುವ ಧ್ವೇಷಪಾರಾಧಗಳಿಂದಾಗಿ ನಮ್ಮ ಪ್ರಜಾಸತ್ತಾತ್ಮಕ ರಚನೆಗೆ ಹಾನಿಯಾಗಲಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಎಚ್ಚರಿಸಿದ್ದಾರೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ 75ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಮಾತನಾಡಿದ ಸಿಂಗ್, ಈ ರೀತಿಯ ಘಟನೆಗಳು ನಮ್ಮ ಸಂವಿಧಾನದಲ್ಲಿ ಸೂಚಿಸಲಾಗಿರುವ ಪ್ರಮುಖ ಧ್ಯೇಯಗಳಾದ ಶಾಂತಿ, ರಾಷ್ಟ್ರೀಯ ಸಮಗ್ರತೆ ಮತ್ತು ಕೋಮು ಸೌಹಾರ್ದತೆಯ ಮುನ್ನಡೆಗೆ ತಡೆಯೊಡ್ಡಲಿವೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಸಿಂಗ್, ನಮ್ಮ ದೇಶದ ಏಕತೆ ಮತ್ತು ಸಮಗ್ರತೆಗಿಂತ ಯಾವುದೂ ಮುಖ್ಯವಲ್ಲ. ಭಾರತವನ್ನು ವಿಭಜಿಸಲು ಸಾಧ್ಯವಿಲ್ಲ. ಜಾತ್ಯೀತವಾದ ನಮ್ಮ ದೇಶದ ತಳಹದಿ ಎಂಬ ರಾಜೀವ್ ಗಾಂಧಿಯ ಮಾತುಗಳನ್ನು ನೆನಪಿಸಿದರು.

ಯಾವುದೇ ಧರ್ಮ ಧ್ವೇಷ ಮತ್ತು ಅಸಹಿಷ್ಣುತೆಯನ್ನು ಬೋಧಿಸುವುದಿಲ್ಲ. ಭಾರತವನ್ನು ವಿಭಜಿಸಲು ಹೊರಗಿನ ಮತ್ತು ಒಳಗಿನ ಸ್ಥಾಪಿತ ಹಿತಾಸಕ್ತಿಗಳು ಧಾರ್ಮಿಕ ಮನೋಭಾವ ಮತ್ತು ಹಿಂಸೆಯನ್ನು ಪ್ರಚೋದಿಸುತ್ತವೆ ಎಂದು ಸಿಂಗ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News