ಜನಾಂಗೀಯ ತಾರತಮ್ಯದ ಮಾತಿಗೆ ಕ್ಷಮೆ ಕೋರಿದ ಝಾಕಿರ್ ನಾಯ್ಕ್

Update: 2019-08-20 17:11 GMT

ಕೌಲಾಲಂಪುರ (ಮಲೇಶ್ಯ), ಆ. 20: ಮಲೇಶ್ಯದಲ್ಲಿ ಜನಾಂಗೀಯ ತಾರತಮ್ಯದ ಮಾತುಗಳನ್ನು ಆಡಿರುವುದಕ್ಕಾಗಿ ವಿದ್ವಾಂಸ ಝಾಕಿರ್ ನಾಯ್ಕ್ ಮಂಗಳವಾರ ಕ್ಷಮೆ ಕೋರಿದ್ದಾರೆ.

ಅವರು ನೀಡಿರುವ ಹೇಳಿಕೆಗಳ ಬಗ್ಗೆ ಪೊಲೀಸರು ಗಂಟೆಗಳ ಕಾಲ ವಿಚಾರಿಸಿದ ಒಂದು ದಿನದ ಬಳಿಕ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಅವರು ಮುಸ್ಲಿಮ್ ಬಹುಸಂಖ್ಯಾತ ಮಲೇಶ್ಯದ ಜನಾಂಗೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಹೇಳಿಕೆಗಳನ್ನು ನೀಡಿರುವುದಕ್ಕಾಗಿ ತೀವ್ರ ಟೀಕೆಗೆ ಒಳಗಾಗಿದ್ದಾರೆ.

ಮಲೇಶ್ಯದಲ್ಲಿರುವ ಹಿಂದೂ ಅಲ್ಪಸಂಖ್ಯಾತರು ಭಾರತದಲ್ಲಿರುವ ಮುಸ್ಲಿಮ್ ಅಲ್ಪಸಂಖ್ಯಾತರಿಗಿಂತ ‘‘100 ಪಟ್ಟು ಹೆಚ್ಚು ಹಕ್ಕುಗಳನ್ನು ಹೊಂದಿದ್ದಾರೆ’’ ಹಾಗೂ ಮಲೇಶ್ಯದ ಚೀನಿಯರು ದೇಶದ ಅತಿಥಿಗಳಾಗಿದ್ದಾರೆ ಎಂದು ಅವರು ಈ ತಿಂಗಳ ಆದಿ ಭಾಗದಲ್ಲಿ ಹೇಳಿದ್ದರು.

ಈ ಹೇಳಿಕೆಗಳಿಗಾಗಿ ಮಲೇಶ್ಯ ಪೊಲೀಸರು ಝಾಕಿರ್ ನಾಯ್ಕ್ ರನ್ನು ಸೋಮವಾರ 10 ಗಂಟೆಗಳ ಕಾಲ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News