ಕುಡಿಯುವ ನೀರಿನಲ್ಲಿರುವ ಪ್ಲಾಸ್ಟಿಕ್‌ಗಳು ಆರೋಗ್ಯಕ್ಕೆ ಒಡ್ಡುವ ಅಪಾಯ ಕಡಿಮೆ: ಡಬ್ಲ್ಯುಎಚ್ಒ

Update: 2019-08-22 15:07 GMT

ಜಿನೇವ (ಸ್ವಿಟ್ಸರ್‌ಲ್ಯಾಂಡ್), ಆ. 22: ಕುಡಿಯುವ ನೀರಿನಲ್ಲಿ ಸೇರಿಕೊಂಡಿರುವ ಮೈಕ್ರೋಪ್ಲಾಸ್ಟಿಕ್‌ಗಳು (ಅತ್ಯಂತ ಚಿಕ್ಕ ಗಾತ್ರದ ಪ್ಲಾಸ್ಟಿಕ್ ಕಣಗಳು), ಈಗಿನ ಮಟ್ಟಗಳಲ್ಲಿ ಮಾನವ ಆರೋಗ್ಯಕ್ಕೆ ‘ಕಡಿಮೆ’ ಅಪಾಯವನ್ನು ಒಡ್ಡುತ್ತದೆ, ಆದರೆ ಬಳಕೆದಾರರಲ್ಲಿ ವಿಶ್ವಾಸ ತುಂಬಲು ಹೆಚ್ಚಿನ ಸಂಶೋಧನೆ ಅಗತ್ಯವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಗುರುವಾರ ತಿಳಿಸಿದೆ.

ನಳ್ಳಿ ಮತ್ತು ಬಾಟಲಿ ನೀರಿನಲ್ಲಿ ಪತ್ತೆಯಾಗುವ ಪ್ಲಾಸ್ಟಿಕ್ ಕಣಗಳ ಬಗ್ಗೆ ಕಳೆದ ವರ್ಷ ನಡೆದ ಅಧ್ಯಯನಗಳು ಸಾರ್ವಜನಿಕವಾಗಿ ಕಳವವಳಕ್ಕೆ ಕಾರಣವಾಗಿವೆ, ಆದರೆ ಸೀಮಿತ ಅಂಕಿಅಂಶಗಳು ಮಾತ್ರ ಭರವಸೆ ಹುಟ್ಟಿಸುವಂತೆ ಕಾಣುತ್ತಿವೆ ಎಂದು ವಿಶ್ವಸಂಸ್ಥೆಯ ಆರೋಗ್ಯ ಘಟಕವು ಪ್ಲಾಸ್ಟಿಕ್‌ಗೆ ಸಂಬಂಧಿಸಿದ ಸಂಭಾವ್ಯ ಆರೋಗ್ಯ ಅಪಾಯಗಳ ಕುರಿತ ತನ್ನ ಮೊದಲ ವರದಿಯಲ್ಲಿ ಹೇಳಿದೆ.

ಮೈಕ್ರೋಪ್ಲಾಸ್ಟಿಕ್‌ಗಳು ಕುಡಿಯುವ ನೀರಿನ ಮೂಲಗಳನ್ನು ಕಾಲುವೆಯಲ್ಲಿ ಹರಿಯುವ ನೀರು ಮತ್ತು ತ್ಯಾಜ್ಯ ನೀರಿನ ಮೂಲಕ ಸೇರುತ್ತವೆ ಎಂದು ಡಬ್ಲುಎಚ್‌ಒ ತಿಳಿಸಿದೆ.

 ಬಾಟಲಿ ನೀರಿನಲ್ಲಿ ಕಂಡುಬರುವ ಮೈಕ್ರೋಪ್ಲಾಸ್ಟಿಕ್‌ಗಳಿಗೆ ಬಾಟಲೀಕರಣ ಮತ್ತು/ಅಥವಾ ಪ್ಲಾಸ್ಟಿಕ್ ಮುಚ್ಚಳದಂಥ ಪ್ಯಾಕೇಂಜಿಂಗ್ ಪ್ರಕ್ರಿಯೆ ಭಾಗಶಃ ಕಾರಣ ಎನ್ನುವುದನ್ನು ಪುರಾವೆಗಳು ತೋರಿಸಿವೆ.

 ‘‘ಈ ಸಂಶೋಧನೆಯ ಆಧಾರದಲ್ಲಿ, ಕುಡಿಯುವ ನೀರಿನಲ್ಲಿ ಇರುವ ಮೈಕ್ರೋಪ್ಲಾಸ್ಟಿಕ್‌ಗಳು ಜನರ ಆರೋಗ್ಯದ ಮೇಲೆ ಬೀರುವ ಪರಿಣಾಮ ಸೀಮಿತ ಎಂಬ ಭರವಸೆಯನ್ನು ಜಗತ್ತಿನಾದ್ಯಂತ ಇರುವ ಕುಡಿಯುವ ನೀರಿನ ಬಳಕೆದಾರರಲ್ಲಿ ತುಂಬುವುದಾಗಿದು ಇದರ ಮುಖ್ಯ ಉದ್ದೇಶಗಾಗಿದೆ’’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಇಲಾಖೆಯ ಬ್ರೂಸ್ ಗಾರ್ಡನ್ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News