ನೆರೆ ಸಂತ್ರಸ್ತರಿಗೆ ಬಿಟಿಎಂ ಲೇಔಟ್‌ನಿಂದ 1.10 ಕೋಟಿ ರೂ. ಸಾಮಗ್ರಿಗಳ ರವಾನೆ

Update: 2019-08-22 15:40 GMT

ಬೆಂಗಳೂರು, ಆ. 22: ರಾಜ್ಯದಲ್ಲಿ ಸಂಭವಿಸಿದ ಬಾರೀ ಮಳೆ, ಪ್ರವಾಹದಿಂದ ಬಾಧಿತರಾಗಿರುವ ಸಂತ್ರಸ್ತರಿಗೆ ಬಿಟಿಎಂ ಬಡಾವಣೆಯಿಂದ 1.10ಕೋಟಿ ರೂ. ಮೊತ್ತದ ದಿನಬಳಕೆ ಸಾಮಗ್ರಿಗಳನ್ನು ರವಾನಿಸಲಾಯಿತು.

ಮಾಜಿ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ನೆರೆ ಸಂತ್ರಸ್ತರಿಗಾಗಿ ಸಂಗ್ರಹಿಸಿದ ವಸ್ತುಗಳನ್ನು ಆರು ಲೋಡು ಸರಕು ಸಾಗಾಣೆ ವಾಹನಗಳ ಮೂಲಕ ಬಾಗಲಕೋಟೆಗೆ ಕಳುಹಿಸಿಕೊಡಲಾಯಿತು.

ಬಳಿಕ ಮಾತನಾಡಿದ ಶಾಸಕ ರಾಮಲಿಂಗಾ ರೆಡ್ಡಿ, ನೆರೆ ಸಂತ್ರಸ್ತರಿಗೆ ನಿರೀಕ್ಷೆಗೂ ಮೀರಿ ಕ್ಷೇತ್ರದ ಜನತೆ ಸ್ಪಂದಿಸಿದ್ದಾರೆ. ಪ್ರವಾಹ ಸಂತ್ರಸ್ತರಿಗೆ ಅಗತ್ಯವಿರುವ ಹಾಗೂ ದಿನ ಬಳಕೆಯ ಎಲ್ಲ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಕ್ಷೇತ್ರದಲ್ಲಿಂದು ನೆರೆ ಸಂತ್ರಸ್ತರಿಗೆ 1.10 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಬಾಗಲಕೋಟೆಗೆ ಐವತ್ತು ಹಳ್ಳಿಗಳಿಗೆ ಕಳಿಸಿಕೊಡಲಾಗಿದೆ. ಈ ವೇಳೆ ಕಾರ್ಯಕ್ರಮದಲ್ಲಿ ರಾಮಲಿಂಗಾ ರೆಡ್ಡಿ ಹಾಗೂ ಮಾಜಿ ಮೇಯರ್ ಮಂಜುನಾಥ್ ರೆಡ್ಡಿ, ಜಿ.ಮಂಜುನಾಥ್ ಪಾಲಿಕೆ ಸದಸ್ಯರು ಸುದ್ದಗುಂಟೆ ಪಾಳ್ಯ ಹಾಗೂ ಪಾಲಿಕೆ ಸದಸ್ಯರುಗಳು, ರಾಮಲಿಂಗಾಡ್ಡಿ ಸ್ನೇಹಿತರು ಹಾಗೂ ಸಾರ್ವಜನಿಕರು ನೆರೆ ಸಂತ್ರಸ್ತರ ವಸ್ತುಗಳಿಗೆ ಸಹಕಾರ ನೀಡಿದ್ದಾರೆ.

ಆಲಮಟ್ಟಿ ಆಣೆಕಟ್ಟೆ ನಿರ್ಮಾಣ ಮಾಡಲು ಭೂಮಿ ನೀಡಿ ಇಡೀ ರಾಜ್ಯಕ್ಕೆ ಬಹುದೊಡ್ಡ ತ್ಯಾಗ ಮಾಡಿರುವ ಬಾಗಲಕೋಟೆ ಸಂತ್ರಸ್ತರಿಗೆ ಮಿಡಿಯುವುದು ನಮ್ಮ ಕರ್ತವ್ಯ. ಅಲ್ಲಿನ ಜನರಿಗೆ ಏನು ಬೇಕೆಂಬ ಬಗ್ಗೆ ಸ್ವತಃ ಸಂತ್ರಸ್ತರಿಂದಲೇ ಮಾಹಿತಿ ಪಡೆದು ಅಗತ್ಯ ವಸ್ತುಗಳನ್ನು ಸಂಗ್ರಹಿಸಲಾಗಿದೆ. ನವಲಗುಂದ, ಬೀಳಗಿ, ಹುನಗುಂದ ಮತ್ತಿತರ ಕಡೆಗಳಲ್ಲಿ ನಾಳೆಯಿಂದ ತಮ್ಮ ನೇತೃತ್ವದಲ್ಲೇ ಪರಿಕರಗಳು ವಿತರಣೆಯಾಗಲಿದೆ ಎಂದು ಹೇಳಿದರು.

ಶುಕ್ರವಾರ ಹಾಗೂ ಶನಿವಾರ, ರವಿವಾರ ಮೂರು ದಿನಗಳ ಕಾಲ ಖುದ್ದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಪಾಲಿಕೆ ಸದಸ್ಯರ ತಂಡದೊಂದಿಗೆ ಸ್ವತಃ ತಮ್ಮ ತಂಡದೊಂದಿಗೆ ಬಾಗಲಕೋಟೆಯ ನೆರೆ ಸಂತ್ರಸ್ತರಿಗೆ ಸರಕು ಸಾಮಗ್ರಿಗಳನ್ನು ವಿತರಣೆ ಮಾಡಲಿದ್ದಾರೆ ಆನೇಕಲ್‌ನಿಂದ ಎರಡು, ತಾವರೆಕೆರೆ ಮತ್ತು ಜಯನಗರ ಮತ್ತಿತರ ಕಡೆಗಳಿಂದ ಸಂಗ್ರಹಿಸಿದ್ದ ವಸ್ತುಗಳನ್ನು ಬಾಗಲಕೋಟೆಯ ನದಿ ತೀರದ ಜಮಖಂಡಿ, ಮೂಡಲಿಗಿ, ಮುಧೋಳ್, ಗೋಕಾಕ್ ತಾಲೂಕುಗಳ 35 ರಿಂದ 40 ಗ್ರಾಮಗಳಿಗೆ ತೆರಳಿ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಗಿತ್ತು. ಆಗ ಆಹಾರ ವಸ್ತುಗಳು ಬೇಡ, ಬಟ್ಟೆ, ಬರೆ, ಪಾತ್ರೆ ಪಗಡೆಗಳನ್ನು ಒದಗಿಸುವಂತೆ ಕೇಳಿದ್ದರು. ಅದ್ದರಂತೆ ಈ ಬಾರಿ ಆಹಾರ ವಸ್ತುಗಳನ್ನು ರವಾನಿಸುತ್ತಿಲ್ಲ ಎಂದರು.

10 ಸಾವಿರ ಹೊದಿಕೆ, 4,500 ಸೀರೆಗಳು, 2200 ಕುಕ್ಕರ್, ಊಟದ ತಟ್ಟೆ-ಲೋಟ, ಬಕೆಟ್‌ಗಳು, ಮಗ್, ಟವಲ್, ಲುಂಗಿ, ಎಂಟು ವರ್ಷಗಳ ಒಳಗಿನ ಮಕ್ಕಳ ಬಟ್ಟೆಗಳು, ಶಾಲಾ ಬ್ಯಾಗ್‌ಗಳು, ಚಾಪೆ, ಪ್ಯಾಂಟ್-ಶರ್ಟ್, ಪಂಚೆ, ಶೂ, ಪುರುಷರ ಒಳ ಉಡುಪುಗಳು, ಜಮಖಾನ, ರೈಸ್ ಬ್ಯಾಗ್, ಸೋಪು, ಟೂತ್ ಬ್ರಷ್ ಮತ್ತಿತರ ವಸ್ತುಗಳನ್ನು ನೆರೆ ಸಂತ್ರಸ್ತರಿಗೆ ನೀಡಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News