ಉಗ್ರರು ನುಸುಳಿದ್ದಾರೆಂಬ ಗುಪ್ತಚರ ಇಲಾಖೆ ವರದಿ: ತಮಿಳುನಾಡಿನಲ್ಲಿ ಕಟ್ಟೆಚ್ಚರ

Update: 2019-08-23 07:52 GMT

ಚೆನ್ನೈ, ಆ.23: ರಾಜ್ಯಕ್ಕೆ ಎಲ್ಇಟಿ ಸಂಘಟನೆಯ ಆರು ಉಗ್ರರು ಪ್ರವೇಶಿಸಿದ್ದಾರೆ ಎಂಬ ಗುಪ್ತಚರ ಇಲಾಖೆಯ ವರದಿಯ ಹಿನ್ನೆಲೆಯಲ್ಲಿ ತಮಿಳುನಾಡು ಪೊಲೀಸರು ರಾಜ್ಯದಲ್ಲಿ ಕಟ್ಟೆಚ್ಚರವಹಿಸಿದ್ದಾರೆ. ಆರು ಉಗ್ರರ ಪೈಕಿ ಓರ್ವ ಪಾಕಿಸ್ತಾನದ ಪ್ರಜೆ ಎಂದು ನಂಬಲಾಗಿದೆ.

‘‘ನಾವು ಈ ಮಾಹಿತಿಯನ್ನು ಸ್ವೀಕರಿಸಿದ್ದು, ನಮ್ಮ ಪಡೆಗೆ ಎಚ್ಚರಿಕೆ ರವಾನಿಸಿದ್ದೇವೆ. ಶಂಕಿತ ವ್ಯಕ್ತಿ ಅಥವಾ ಶಂಕಿತ ಚಟುವಟಕೆಯನ್ನು ಸಾರ್ವಜನಿಕರು ನೋಡಿದರೆ ತಕ್ಷಣವೇ ಮಾಹಿತಿ ನೀಡಬೇಕೆಂದು ಬಯಸುತ್ತೇವೆ’’ ಎಂದು ಉನ್ನತ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ರಾಜ್ಯ ರಾಜಧಾನಿ ಚೆನ್ನೈ ಹಾಗೂ ಕೊಯಮತ್ತೂರಿನಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಹೊಟೇಲ್ಗಳು, ವಿಮಾನ ನಿಲ್ದಾಣಗಳು, ರೈಲ್ವೇ ನಿಲ್ದಾಣಗಳು, ಸಿನಿಮಾ ಗೃಹಗಳು, ಶಾಪಿಂಗ್ ಮಾಲ್ಗಳು ಹಾಗೂ ಪೂಜಾ ಸ್ಥಳಗಳಲ್ಲಿ ಕಟ್ಚೆಚರ ವಹಿಸಲಾಗಿದೆ. ಕೊಯಮತ್ತೂರಿನಲ್ಲಿ ಈ ಹಿಂದೆ ಮೂಲಭೂತವಾದಿಗಳ ಗುಂಪು ದಾಳಿ ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News