ಪಿಂಚಣಿ ಪಡೆಯಲಾಗದೆ 19 ವರ್ಷಗಳಿಂದ ಶೌಚಾಲಯದಲ್ಲೇ ಜೀವನ ಸಾಗಿಸುತ್ತಿರುವ ವೃದ್ಧೆ!

Update: 2019-08-23 09:18 GMT

ಮಧುರೈ, ಆ.23: ಇದು 65 ವರ್ಷ ವಯಸ್ಸಿನ ಮಹಿಳೆಯ ಕರುಣಾಜನಕ ಕಥೆ. ಕರುಪ್ಪಾಯಿ (65) ಎಂಬ ಮಹಿಳೆ ಕಳೆದ ಹತ್ತೊಂಬತ್ತು ವರ್ಷಗಳಿಂದ ವಾಸವಿರುವುದು ಸಾರ್ವಜನಿಕ ಶೌಚಾಲಯದಲ್ಲಿ. ಶೌಚಾಲಯದಲ್ಲಿ ಕರುಪ್ಪಾಯಿ ವಾಸವಿರುವ ಹಾಗೂ ಅಷ್ಟು ಇಕ್ಕಟ್ಟಿನಲ್ಲಿ ಹೇಗೆ ಜೀವನ ಸಾಗಿಸುತ್ತಿದ್ದಾರೆ ಎನ್ನುವುದನ್ನು ತೋರಿಸುವ ಚಿತ್ರವನ್ನು ಎಎನ್‌ಐ ಸುದ್ದಿಸಂಸ್ಥೆ ಬಿಡುಗಡೆ ಮಾಡಿದ್ದು, ಇದು ವೈರಲ್ ಆಗಿದೆ.

"ಮಧುರೈ: 65 ವರ್ಷದ ಕರುಪ್ಪಾಯಿ ಎಂಬ ಮಹಿಳೆ ರಾಮನಾಡು ಪ್ರದೇಶದ ಸಾರ್ವಜನಿಕ ಶೌಚಾಲಯದಲ್ಲಿ 19 ವರ್ಷಗಳಿಂದ ವಾಸವಿದ್ದಾರೆ. ಶೌಚಾಲಯ ಸ್ವಚ್ಛಗೊಳಿಸಿ ಜೀವನ ಸಾಗಿಸುತ್ತಿದ್ದಾರೆ. ಶೌಚಾಲಯಕ್ಕೆ ಬರುವವರಿಗೆ ಅಲ್ಪಶುಲ್ಕ ವಿಧಿಸಿ ಜೀವನ ಸಾಗಿಸುತ್ತಿದ್ದಾರೆ" ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಎಎನ್‌ಐ ಟ್ವೀಟ್ ಮಾಡಿದೆ.

ಯಾವ ಸೌಲಭ್ಯವೂ ಇಲ್ಲದ ಪುಟ್ಟ ಶೌಚಾಲಯದಲ್ಲಿ ಆಕೆ ಜೀವನ ಸಾಗಿಸುತ್ತಿರುವುದು ನಿಜಕ್ಕೂ ವಿಷಾದನೀಯ. "ನಾನು ವೃದ್ಧಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಆದರೆ ಸಿಗಲಿಲ್ಲ. ಹಲವು ಅಧಿಕಾರಿಗಳನ್ನು ಭೇಟಿ ಮಾಡಿ ಮಾಡಿದ ಮನವಿಗೆ ಸ್ಪಂದನೆ ಸಿಕ್ಕಿಲ್ಲ" ಎಂದು ಅವರು ಹೇಳುತ್ತಾರೆ.

"ಬೇರೆ ಯಾವ ಆದಾಯ ಮೂಲವೂ ಇಲ್ಲದಿರುವುದರಿಂದ ಶೌಚಾಲಯದಲ್ಲಿ ವಾಸ ಅನಿವಾರ್ಯವಾಗಿದೆ. ದಿನಕ್ಕೆ 70-80 ರೂಪಾಯಿ ಗಳಿಕೆಯೇ ಜೀವನಾಧಾರ ಎಂದು ವಿವರಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News