ದಿಲ್ಲಿಯಲ್ಲಿ ಇಳಿಯುವಾಗ ಏಕಾಏಕಿ ಆಗಸದಲ್ಲೇ ಸುತ್ತಾಡಿದ ರಾಹುಲ್ ಇದ್ದ ವಿಮಾನ

Update: 2019-08-25 14:48 GMT

ಹೊಸದಿಲ್ಲಿ, ಆ.25: ರಾಹುಲ್ ಗಾಂಧಿ ಹಾಗೂ ಇತರ ಹಿರಿಯ ವಿಪಕ್ಷ ನಾಯಕರು ಶನಿವಾರ ಶ್ರೀನಗರದಿಂದ ದಿಲ್ಲಿಗೆ ಮರಳುತ್ತಿದ್ದ ವಿಮಾನ ದಿಲ್ಲಿಯಲ್ಲಿ ಇಳಿಯುವಾಗ ಸಮಸ್ಯೆ ಎದುರಾಯಿತು ಎಂದು ವರದಿಯಾಗಿದೆ.

ಗೋ ಏರ್ ವಿಮಾನ ದಿಲ್ಲಿಯ ವಿಮಾನ ನಿಲ್ದಾಣದಲ್ಲಿ ಇಳಿಯಲು ಸಿದ್ಧವಾಗುತ್ತಿದ್ದ ಸಂದರ್ಭ ಪೈಲಟ್ ಏಕಾಏಕಿ ವಿಮಾನವನ್ನು ಆಗಸದಲ್ಲೇ ಸುತ್ತಾಡಿಸತೊಡಗಿದರು. ವಿಮಾನದಲ್ಲಿ ರಾಹುಲ್ ಜೊತೆ ಗುಲಾಂ ನಬಿ ಆಝಾದ್, ಆರ್‌ಜೆಡಿ ಮುಖಂಡ ಮನೋಜ್ ಝಾ, ಸಿಪಿಐ(ಎಂ)ನ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಸೇರಿದಂತೆ ವಿಪಕ್ಷದ ಹಲವು ಹಿರಿಯ ಮುಖಂಡರಿದ್ದರು.

ರನ್‌ವೇ ಲಭ್ಯವಾಗದ ಕಾರಣ ಹೀಗೆ ಮಾಡಿರುವುದಾಗಿ ಬಳಿಕ ಪೈಲಟ್ ಮಾಹಿತಿ ನೀಡಿದರು. ನಂತರ ವಿಮಾನ ಯಾವುದೇ ಸಮಸ್ಯೆಯಿಲ್ಲದೆ ಲ್ಯಾಂಡ್ ಆಗಿದೆ. ರನ್‌ವೇಯಲ್ಲಿ ಮತ್ತೊಂದು ವಿಮಾನವಿದ್ದ ಕಾರಣ ಸ್ವಲ್ಪ ಹೊತ್ತಿನ ಬಳಿಕ ಲ್ಯಾಂಡ್ ಮಾಡುವಂತೆ ಸೂಚಿಸಲಾಗಿದೆ ಎಂದು ಗೋಏರ್ ಸಂಸ್ಥೆಯ ವಕ್ತಾರರು ದೃಢಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News