​ಹೆಲಿಕಾಪ್ಟರ್‌ಗೆ ಢಿಕ್ಕಿ ಹೊಡೆದ ಲಘು ವಿಮಾನ: 7 ಮಂದಿ ಮೃತ್ಯು

Update: 2019-08-26 03:57 GMT

ಮ್ಯಾಡ್ರಿಡ್ : ಸ್ಪೇನ್‌ನ ಮಲ್ಲೋರ್ಕಾ ದ್ವೀಪದಲ್ಲಿ ರವಿವಾರ ವಾಯುಮಧ್ಯದಲ್ಲಿ ಲಘು ವಿಮಾನವೊಂದು ಹೆಲಿಕಾಪ್ಟರ್‌ಗೆ ಢಿಕ್ಕಿ ಹೊಡೆದು ಸಂಭವಿಸಿದ ದುರಂತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಏಳು ಮಂದಿ ಬಲಿಯಾಗಿದ್ದಾರೆ.

ಮಧ್ಯಾಹ್ನ 1.30ರ ವೇಳೆಗೆ ವಿಮಾನವು ಕೇಂದ್ರೀಯ ನಗರ ಇಂಕಾ ಬಳಿ ಹೆಲಿಕಾಪ್ಟರ್‌ಗೆ ಢಿಕ್ಕಿ ಹೊಡೆದಾಗ, ವಿಮಾನದಲ್ಲಿದ್ದ ಇಬ್ಬರು ಹಾಗೂ ಹೆಲಿಕಾಪ್ಟರ್‌ನಲ್ಲಿದ್ದ ಐದು ಮಂದಿ ಸಾವನ್ನಪ್ಪಿದರು ಎಂದು ಪೊಲೀಸ್ ವಕ್ತಾರರು ಹೇಳಿದ್ದಾರೆ.

ಹೆಲಿಕಾಪ್ಟರ್‌ನಲ್ಲಿ ಇಬ್ಬರು ಮಕ್ಕಳು ಹಾಗೂ ತಂದೆ ತಾಯಿ, ಪೈಲಟ್ ಇದ್ದರು. ಹೆಲಿಕಾಪ್ಟರ್ ಜರ್ಮನಿ ನೋಂದಣಿ ಹೊಂದಿತ್ತು. ಆದರೆ ಮೃತಪಟ್ಟವರು ಜರ್ಮನಿಯವರೇ ಎನ್ನುವುದು ಖಚಿತವಾಗಿಲ್ಲ. ಹೆಲಿಕಾಪ್ಟರ್‌ನಲ್ಲಿದ್ದವರು ಎಲ್ಲಿಯವರು ಎಂಬ ಬಗ್ಗೆ ತನಿಖೆ ನಡೆದಿದೆ ಎಂದು ಮೂಲಗಳು ಹೇಳಿವೆ. ಪರಸ್ಪರ ಢಿಕ್ಕಿಯಾದಾಗ ಎರಡೂ ವಿಮಾನಗಳು ಹೊಲಕ್ಕೆ ಪತನಗೊಂಡವು.

ಮಲ್ಲೋರ್ಕಾ ಮತ್ತು ಬಲೇರಿಕ್ ದ್ವೀಪಗಳು ಸ್ಪೇನ್ ಹಾಗೂ ವಿದೇಶಿ ಪ್ರವಾಸಿಗರಿಗೆ ಬೇಸಿಗೆಗೆ ಅಚ್ಚುಮೆಚ್ಚಿನ ಪ್ರವಾಸಿ ತಾಣಗಳಾಗಿವೆ. ಪ್ರಧಾನಿ ಪೆರ್ಡೊ ಸಾಂಚೆಸ್, ಈ ದುರಂತದಲ್ಲಿ ಮಡಿದವರಿಗೆ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News