ಝಾಕಿರ್ ನಾಯ್ಕ್ ಗಡಿಪಾರು ಮಾಡಲು ಪ್ರಧಾನಿ ಮೋದಿಯಿಂದ ಮಲೇಶ್ಯ ಪ್ರಧಾನಿಗೆ ಮನವಿ

Update: 2019-09-05 09:43 GMT

ವ್ಲಾಡಿವೋಸ್ಟಾಕ್‌, ಸೆ.5:  ಧಾರ್ಮಿಕ ವಿದ್ವಾಂಸ ಝಾಕಿರ್ ನಾಯ್ಕ್ ಅವರನ್ನು ಭಾರತಕ್ಕೆ ಗಡಿಪಾರು ಮಾಡಲು ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮಲೇಶ್ಯದ ಪ್ರಧಾನಿ ಡಾ.ಮಹಾತಿರ್ ಮುಹಮ್ಮದ್ ಅವರನ್ನು ಕೋರಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.

ಈ ವಿಚಾರದಲ್ಲಿ ಮಲೇಶ್ಯದ ಪ್ರಧಾನಿ ನಿಲುವು ಏನೆಂದು ಇನ್ನೂ ಸ್ಪಷ್ಟವಾಗಿಲ್ಲ ಆದರೆ ಈ ವಿಷಯದ ಬಗ್ಗೆ ಅಧಿಕಾರಿಗಳು ಸಂಪರ್ಕದಲ್ಲಿರುವಂತೆ ಉಭಯ ನಾಯಕರು ನಿರ್ಧರಿಸಿದ್ದಾರೆ ಎಂದು ಗೊತ್ತಾಗಿದೆ.

"ಈ ವಿಷಯದ ಬಗ್ಗೆ  ಅಧಿಕಾರಿಗಳು ಸಂಪರ್ಕದಲ್ಲಿರುತ್ತಾರೆ ಎಂದು ಉಭಯ ದೇಶಗಳ ನಾಯಕರು  ನಿರ್ಧರಿಸಿದ್ದಾರೆ. ಇದು ನಮಗೆ ಪ್ರಮುಖ ವಿಷಯವಾಗಿದೆ" ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

 ಮೂರು ದಿನಗಳ ಪೂರ್ವ ಆರ್ಥಿಕ ಶೃಂಗಸಭೆಗೆ ಮುಂಚಿತವಾಗಿ ರಷ್ಯಾದ ವ್ಲಾಡಿವೋಸ್ಟಾಕ್‌ನಲ್ಲಿ ಗುರುವಾರ ಉಭಯ ನಾಯಕರ ನಡುವೆ ಭೇಟಿ ನಡೆದಿದೆ. ಇದು ಉಭಯ ನಾಯಕರ ನಡುವಿನ ಎರಡನೇ ಸಭೆ. ಕಳೆದ ವರ್ಷ ಮೇ ತಿಂಗಳಲ್ಲಿ ಪ್ರಧಾನಿ ಡಾ.ಮಹಾತಿರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿಯಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News