ವಿಕ್ರಮ್ ಲ್ಯಾಂಡರ್ ಸಂಪರ್ಕ ಕಡಿತಕ್ಕೆ ನೈಜ ಕಾರಣ ತಿಳಿಸಿದ ಇಸ್ರೋ ಮುಖ್ಯಸ್ಥ

Update: 2019-09-07 17:08 GMT

ಹೊಸದಿಲ್ಲಿ,ಸೆ.7: ಸದ್ಯ ಚಂದ್ರನ ಮೇಲೆ ಕಳೆದುಹೋಗಿರುವ ವಿಕ್ರಮ್ ಲ್ಯಾಂಡರನ್ನು ಹುಡುಕುವ ಕಾರ್ಯ 14 ದಿನಗಳ ಕಾಲ ನಡೆಯಲಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಸಿವನ್ ಶನಿವಾರ ತಿಳಿಸಿದ್ದಾರೆ.

ವಿಕ್ರಮ್ ಲ್ಯಾಂಡರ್ ಇಸ್ರೋ ನಿಯಂತ್ರಣ ಕೇಂದ್ರದಿಂದ ಸಂಪರ್ಕ ಕಡಿದುಕೊಂಡ ನಂತರ ಇದೇ ಮೊದಲ ಬಾರಿ ರಾಷ್ಟ್ರೀಯ ಪ್ರಸಾರವಾಹಿನಿ ದೂರದರ್ಶನಕ್ಕೆ ನೀಡಿದ ಹೇಳಿಕೆಯಲ್ಲಿ ಕೆ. ಸಿವನ್, ಕೊನೆ ಗಳಿಗೆಯಲ್ಲಿ ದೋಷಪೂರಿತ ನಿಭಾವಣೆಯೇ ಯೋಜನೆಯ ವೈಫಲ್ಯಕ್ಕೆ ಕಾರಣ ಎಂದು ತಿಳಿಸಿದ್ದಾರೆ. ಯೋಜನೆಯ ಕೊನೆಯ ಭಾಗವನ್ನು ಸರಿಯಾಗಿ ನಿಭಾಯಿಸುವಲ್ಲಿ ವಿಫಲವಾಗಿರುವುದೇ ಇಡೀ ಯೋಜನೆಯ ವೈಫಲ್ಯಕ್ಕೆ ಕಾರಣವಾಗಿದೆ. ಈ ಹಂತದಲ್ಲೇ ನಾವು ವಿಕ್ರಮ್‌ನಿಂದ ಸಂಪರ್ಕ ಕಡಿದುಕೊಂಡೆವು ಎಂದು ಇಸ್ರೋ ಮುಖ್ಯಸ್ಥ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News