ಸೌದಿ: ಇಂಧನ ಸಚಿವರಾಗಿ ದೊರೆ ಸಲ್ಮಾನ್ ಪುತ್ರ ಅಬ್ದುಲ್ಲಝೀಝ್ ನೇಮಕ

Update: 2019-09-08 17:18 GMT

  ರಿಯಾದ್,ಸೆ.8: ಸೌದಿ ಆರೇಬಿಯದ ದೊರೆ ಸಲ್ಮಾನ್ ಅವರು ದೇಶದ ಇಂಧನ ಸಚಿವರಾಗಿ ತನ್ನ ಪುತ್ರ ರಾಜಕುಮಾರ ಅಬ್ದುಲ್ಲಝೀಝ್ ಅವರನ್ನು ರವಿವಾರ ನೇಮಿಸಿ ಆದೇಶ ಹೊರಡಿಸಿದ್ದಾರೆ. ತೈಲ ಬೆಲೆಗಳು ಕುಸಿತವನ್ನು ಎದುರಿಸುತ್ತಿರುವ ಸಂದರ್ಭದಲ್ಲೇ ಇಂಧನ ಸಚಿವ ಸ್ಥಾನಕ್ಕೆ ಅಬ್ದುಲ್ಲಝೀಝ್ ಅವರ ನೇಮಕವು ಹೆಚ್ಚಿನ ಮಹತ್ವವನ್ನು ಪಡೆದಿದೆ.

  ಅಬ್ದುಲ್ಲಝೀಝ್ ಬಿನ್ ಸಲ್ಮಾನ್ ಅವರು ಸೌದಿ ಆರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರ ಮಲಸಹೋದರನಾಗಿದ್ದಾರೆ. ಸೌದಿ ರಾಜಕುಟುಂಬದ ಸದಸ್ಯರೊಬ್ಬರು ಮಹತ್ವದ ಇಂಧನ ಸಚಿವ ಸ್ಥಾನಕ್ಕೆ ನೇಮಕಗೊಂಡಿರುವುದು ಇದೇ ಮೊದಲ ಸಲವಾಗಿದೆ.

ಖಲೀಲ್ ಅಲ್-ಫಲಹ್ ಅವರು ಹಾಲಿ ಇಂಧನ ಸಚಿವರಾಗಿದ್ದು, ಅವರ ಸ್ಥಾನದಲ್ಲಿ ಅಬ್ದುಲ್ಲಝೀಝ್ ಅವರ ನೇಮಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News