ಜೆಎನ್‍ಯು ಚುನಾವಣೆ: ಎಡರಂಗ ಕ್ವೀನ್ ಸ್ವೀಪ್ ಸಾಧ್ಯತೆ

Update: 2019-09-09 08:32 GMT

ಹೊಸದಿಲ್ಲಿ, ಸೆ.9:  ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್ ಯು) ವಿದ್ಯಾರ್ಥಿ ಯೂನಿಯನ್ 2019 ಚುನಾವಣೆಯ ಫಲಿತಾಂಶಗಳನ್ನು ತಡೆಹಿಡಿಯುವಂತೆ ದಿಲ್ಲಿ ಹೈಕೋರ್ಟ್ ಅಧಿಸೂಚನೆ ಹೊರಡಿಸಿದ ನಂತರ ವಿಶ್ವವಿದ್ಯಾಲಯದ ಚುನಾವಣಾ ಸಮಿತಿ ವಿಜೇತರನ್ನು ಘೋಷಿಸಿಲ್ಲ. ಆದರೆ ಎಡರಂಗಕ್ಕೆ ಅಭೂತಪೂರ್ವ ಯಶಸ್ಸು ದೊರಕಿದೆ ಎಂದೇ ನಂಬಲಾಗಿದೆ.

ಮತ ಎಣಿಕೆ ಪ್ರಕ್ರಿಯೆಯಲ್ಲಿ ತಲೆದೋರಿದ ಬಿಕ್ಕಟ್ಟಿನ ಪರಿಸ್ಥಿತಿಯ ನಂತರ  ಸಂಪೂರ್ಣ ಫಲಿತಾಂಶವನ್ನು ಚುನಾವಣಾ ಸಮಿತಿಯು ಸೀಲ್ ಮಾಡಲ್ಪಟ್ಟ ಕವರಿನಲ್ಲಿ  ವಿದ್ಯಾರ್ಥಿಗಳ ಡೀನ್ ಗೆ ಕೋರ್ಟ್ ಅಧಿಸೂಚನೆಯಂತೆ ಹಸ್ತಾಂತರಿಸಿದೆ.  ಜೆಎನ್‍ ಯುವಿನ ಚುನಾವಣಾ ಸಮಿತಿ ಲಿಂಗ್‍ ಡೊಹ್ ಸಮಿತಿ ನಿಯಮಗಳನ್ನು ಉಲ್ಲಂಘಿಸಿದೆ ಎಂದು ದೂರಿ ದಾಖಲಾಗಿರುವ ಕೆಲ ಅಪೀಲುಗಳ ವಿಚಾರಣೆಯ ನಂತರ ಸೆಪ್ಟೆಂಬರ್ 17ರ ನಂತರ ಚುನಾವಣೆ ಕುರಿತಂತೆ ನಿರ್ಧಾರ ಕೈಗೊಳ್ಳಲಾಗುವುದು. ಚುನಾವಣೆಯಲ್ಲಿ ಶೇ.68ರಷ್ಟು ಮತದಾರರು ಮತ ಚಲಾಯಿಸಿದ್ದರು.

ಐಶ್ ಘೋಷ್ ಅವರನ್ನು ಕಣಕ್ಕಿಳಿಸಿದ್ದ ಎಡರಂಗ ಎಲ್ಲಾ ನಾಲ್ಕು ಹುದ್ದೆಗಳನ್ನು ತನ್ನದಾಗಿಸಿರುವ ಸಾಧ್ಯತೆಯಿದೆಯೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News