ಹರ್ಯಾಣ ವಿಧಾನಸಭೆ ಚುನಾವಣೆ: ಕಾಂಗ್ರೆಸ್-ಬಿಎಸ್ಪಿ ಮೈತ್ರಿ ಸಾಧ್ಯತೆ

Update: 2019-09-09 15:38 GMT

ಹೊಸದಿಲ್ಲಿ, ಸೆ. 9: ಹರ್ಯಾಣದಲ್ಲಿ ಅಕ್ಟೋಬರ್‌ ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಎಸ್ಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲಿದೆ ಎಂಬ ವದಂತಿ ಹರಡಿದೆ. ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಹಾಗೂ ಬಿಎಸ್ಪಿ ವರಿಷ್ಠೆ ಮಾಯಾವತಿ ನಡುವೆ ಹೊಸದಿಲ್ಲಿಯಲ್ಲಿ ರವಿವಾರ ರಹಸ್ಯ ಸಭೆ ನಡೆದ ಬಳಿಕ ಈ ವದಂತಿ ಹರಡಿದೆ.

ಈ ಸಭೆ ಅರ್ಧ ಗಂಟೆಗಳ ಕಾಲ ನಡೆದಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾಗಿದ್ದ ಕುಮಾರಿ ಸೆಲ್ಜಾ ಕೂಡ ಸಭೆಯಲ್ಲಿ ಹಾಜರಾಗಿದ್ದರು. ಬಿಜೆಪಿ ಆಡಳಿತ ಇರುವ ಹರ್ಯಾಣದಲ್ಲಿ ಮುಂದಿನ ತಿಂಗಳು ವಿಧಾನ ಸಭೆಯ 90 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕಳೆದ ವಾರ ಮಾಯಾವತಿ ಅವರು ತಮ್ಮ ಪಕ್ಷವಾದ ಬಿಎಸ್ಪಿಯನ್ನು ದುಷ್ಯಂತ್ ಚೌಟಾಲಾ ನೇತೃತ್ವದ ಜೆಜೆಪಿಯೊಂದಿಗಿನ ಚುನಾವಣಾ ಪೂರ್ವ ಮೈತ್ರಿಯಿಂದ ಹಿಂದೆ ತೆಗೆದುಕೊಂಡಿದ್ದರು. ಜೆಜೆಪಿ ಐಎನ್‌ಎಲ್‌ಡಿಯಿಂದ ಸಿಡಿದ ಬಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News