‘ಬೆಂಗಳೂರು ಗಣೇಶ ಉತ್ಸವ’ದಲ್ಲಿ ಸಂಗೀತಪ್ರಿಯರ ಮನಗೆದ್ದ ರಸಮಂಜರಿ

Update: 2019-09-10 05:58 GMT

ಬೆಂಗಳೂರು, ಸೆ.10: ಚೌತಿ ಹಬ್ಬದ ಅಂಗವಾಗಿ ‘ಬೆಂಗಳೂರು ಗಣೇಶ ಉತ್ಸವ’ದ 57ನೇ ಆವೃತ್ತಿಯ ಪ್ರಯುಕ್ತ ಸೆ.7ರಂದು ಚಾಮರಾಜ ಪೇಟೆಯ ಪೋರ್ಟ್‌ ಹೈಸ್ಕೂಲ್ ಗ್ರೌಂಡ್‌ನಲ್ಲಿ ಆಯೋಜಿಸಿದ್ದ ಕನ್ನಡ ರಸಮಂಜರಿ ಕಾರ್ಯಕ್ರಮ ಸಂಗೀತಪ್ರಿಯರ ಮನಗೆದ್ದಿತು.

ಜನಪ್ರಿಯ ಗಾಯಕರಾದ ರಾಜೇಶ್ ಕೃಷ್ಣನ್, ದಿವ್ಯ ರಾಘವನ್, ಚಿನ್ಮಯತ್ರೇಯ, ಸಾದ್ವಿನಿ ಕೊಪ್ಪಅವರು ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಹಿಟ್ ಹಾಡುಗಳನ್ನು ಹಾಡಿ ಸಂಗೀತಾಭಿಮಾನಿಗಳನ್ನು ರಂಜಿಸಿದರು.

ಮೋಜುಗಾರ ಸೊಗಸುಗಾರ ಚಿತ್ರದ ‘ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ...’ ಎಂಬ ಹಾಡನ್ನು ಗಾಯಕ ರಾಜೇಶ್ ಕೃಷ್ಣನ್ ಹಾಡಿದರು. ಹೊಂಬಿಸಿಲು ಚಿತ್ರದ ಗೀತೆ ‘ಜೀವ ವೀಣೆ ವೀಡು ಮಿಡಿತದ ಸಂಗೀತ...’ ಹಾಡನ್ನು ರಾಜೇಶ್ ಕೃಷ್ಣನ್ ಹಾಗೂ ದಿವ್ಯಾ ರಾಘವನ್ ಹಾಡಿದರು. ಜಮೀನುದಾರ್ರು ಚಿತ್ರದ ‘ಮಲೆನಾಡ ಹುಡುಗಿ...’ ಹಾಡನ್ನು ಚಿನ್ಮಯಿ ಮತ್ತು ಸಾದ್ವಿನಿ ಕೊಪ್ಪ ಹಾಡಿದರು.

ಕಳ್ಳ ಕುಳ್ಳ ಚಿತ್ರದ ‘ಸುತ್ತ ಮುತ್ತ ಯಾರು ಇಲ್ಲ...’ ಹಾಡನ್ನು ರಾಜೇಶ್ ಕೃಷ್ಣನ್ ಹಾಗೂ ದಿವ್ಯಾ ರಾಘವನ್ ಹಾಡಿದರು. ಹೊಂಬಿಸಿಲು ಚಿತ್ರದ ‘ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು...’ ಹಾಡನ್ನು ರಾಜೇಶ್ ಕೃಷ್ಣನ್ ಹಾಡಿದರು. ವಸಂತ ಲಕ್ಷ್ಮೀ ಚಿತ್ರದ ‘ಬೆಳ್ಳಿ ಮೋಡವೇ ಎಲ್ಲಿ ಓಡುವೆ...’ ಹಾಡನ್ನು ರಾಜೇಶ್ ಕೃಷ್ಣನ್ ಹಾಡಿದರು. ಹೀಗೆ ಡಾ.ವಿಷ್ಣುವರ್ಧನ್ ಅವರಿಗೆ ಕಾರ್ಯಕ್ರಮನ್ನು ಅರ್ಪಿಸಲಾಯಿತು.

ಅರುಣ್ ಕುಮಾರ್ ನೇತೃತ್ವದ ತಂಡದವರಿಂದ ನಡೆದ ಕಾರ್ಯಕ್ರಮ ಜನಮನ ಸೂರೆಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News