ಲ್ಯಾಂಡರ್ ವಿಕ್ರಮ್ ಜೊತೆ ಸಂಪರ್ಕ ಸ್ಥಾಪಿಸಲು ಪ್ರಯತ್ನ ಮುಂದುವರಿದಿದೆ: ಇಸ್ರೋ

Update: 2019-09-10 09:35 GMT

ಬೆಂಗಳೂರು, ಸೆ10: ಬಾಹ್ಯಾಕಾಶ ನೌಕೆ ವಿಕ್ರಮ್ ಇರುವ ಸ್ಥಳ ಗೊತ್ತಾಗಿದ್ದರೂ ಅದರ ಜೊತೆ ಇನ್ನೂ ಸಂವಹನವನ್ನು ಸ್ಥಾಪಿಸಲು ಸಾಧ್ಯವಾಗಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಂಗಳವಾರ ತಿಳಿಸಿದೆ. 

ಲ್ಯಾಂಡರ್ ಶನಿವಾರ ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿಯುತ್ತಿದ್ದಾಗ ಇಸ್ರೋದ ನಿಯಂತ್ರಣ ಕೇಂದ್ರದೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತ್ತು. ಲ್ಯಾಂಡರ್ ವೇಗವಾಗಿ ಇಳಿದ ಹಿನ್ನೆಲೆಯಲ್ಲಿ ಸಂಪರ್ಕ ಕಡಿದುಹೋಗಿದೆ. ಆದರೆ ಲ್ಯಾಂಡರ್ ಗೆ ಹಾನಿಯಾಗಿರುವ ಸಾಧ್ಯತೆಯ ಬಗ್ಗೆ ಇಸ್ರೋ ಹೇಳಿಲ್ಲ.

"ಲ್ಯಾಂಡರ್ ಜೊತೆ ಸಂವಹನವನ್ನು ಸ್ಥಾಪಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ" ಎಂದು ಇಸ್ರೋ ವಿಶ್ವಾಸ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News