ಗಾರ್ಮೆಂಟ್ಸ್ ಕಾರ್ಮಿಕರಿಗೆ 15 ಸಾವಿರ ರೂ.ಮಾಸಿಕ ಕನಿಷ್ಠ ವೇತನ ನಿಗದಿಗೆ ಆಗ್ರಹ

Update: 2019-09-13 13:55 GMT

ಬೆಂಗಳೂರು, ಸೆ. 13: ಸಿದ್ದ ಉಡುಪು ಕಾರ್ಖಾನೆ(ಗಾರ್ಮೆಂಟ್ಸ್) ಕಾರ್ಮಿಕರಿಗೆ ಇತರೆ ಉದ್ಯೋಗಿಗಳಂತೆ ಕನಿಷ್ಠ ವೇತನ 11 ಸಾವಿರ ರೂ.ನಿಂದ 15 ಸಾವಿರ ರೂ. ನಿಗದಿಪಡಿಸಬೇಕು ಎಂದು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಆಗ್ರಹಿಸಿದೆ.

ರಾಜ್ಯ ಸರಕಾರ ಹಾಗೂ ಆಡಳಿತ ವರ್ಗ ಶಾಮೀಲಾಗಿ ಗಾರ್ಮೆಂಟ್ಸ್ ಕಾರ್ಮಿಕರಿಗೆ ಮಾಸಿಕ 8,802 ರೂ.ಕನಿಷ್ಠ ವೇತನ ನಿಗದಿ ಮಾಡಲು ಮುಂದಾಗಿದೆ. ಈ ತಾರತಮ್ಯ ನೀತಿ ಸರಿಯಲ್ಲ. ಇದರಿಂದ ಕಾರ್ಮಿಕರಿಗೆ ಅನ್ಯಾಯವಾಗಲಿದೆ ಎಂದು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಂ.ಡಿ.ಹರಿಗೋವಿಂದ್ ಹೇಳಿದ್ದಾರೆ.

ಕಾರ್ಮಿಕನ ಕುಟುಂಬಕ್ಕೆ ಬೇಕಾದ ಜೀವನಾಧಾರ, ಖರ್ಚು-ವೆಚ್ಚಗಳ ಆಧಾರದ ಮೇಲೆ ಕನಿಷ್ಠ ವೇತನ ನಿಗದಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಆದುದರಿಂದ ಗಾರ್ಮೆಂಟ್ಸ್ ಕಾರ್ಮಿಕರಿಗೆ 11 ಸಾವಿರ ರೂ.ನಿಂದ 15 ಸಾವಿರ ರೂ.ಕನಿಷ್ಠ ವೇತನ ನಿಗದಿಪಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News