7 ದಿನ ಮುಂಚೆಯೇ ಪ್ರತಿಭಟನೆಗೆ ಅರ್ಜಿ ಹಾಕಬೇಕು: ಭಾಸ್ಕರ್ ರಾವ್

Update: 2019-09-14 14:18 GMT

ಬೆಂಗಳೂರು, ಸೆ.14: ಸಾರ್ವಜನಿಕವಾಗಿ ಪ್ರತಿಭಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಸಂಬಂಧಪಟ್ಟಂತೆ 7 ದಿನಗಳ ಮುಂಚೆಯೇ ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಸಿ, ಅನುಮತಿ ಕಡ್ಡಾಯವಾಗಿ ಪಡೆಯಬೇಕೆಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.

ರಾಜಕೀಯ, ಧಾರ್ಮಿಕ ಸಂಘಟನೆಗಳು ಹಾಗೂ ಸಾಮಾಜಿಕ ಗುಂಪುಗಳು ನಗರದಲ್ಲಿ ಆಗಾಗ್ಗೆ ಏರ್ಪಡಿಸುವ ಮೆರವಣಿಗೆ ಹಾಗೂ ಪ್ರತಿಭಟನೆಗಳಿಂದ ಸಾರ್ವಜನಿಕರಿಗೆ ತೊಂದರೆ, ಸುಗಮ ವಾಹನ ಸಂಚಾರಕ್ಕೆ ಧಕ್ಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಸಭೆ ಮತ್ತು ಮೆರವಣಿಗೆ ಸಂದರ್ಭಗಳಲ್ಲಿ ಪೊಲೀಸರ ಅನುಮತಿ ಕಡ್ಡಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಭೆ ಮತ್ತು ಮೆರಣಿಗೆಯನ್ನು ಆಯೋಜಿಸುವಂತಹ ಸಂಘಟನಾಕಾರರು ಕಾರ್ಯಕ್ರಮ ಆಯೋಜಿಸುವ ಪೂರ್ವದಲ್ಲಿ ಮತ್ತು ಕಾರ್ಯಕ್ರಮ ಜರಗುವ ಸಂದರ್ಭದಲ್ಲಿ ಕಡ್ಡಾಯವಾಗಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಪ್ರಕಟನೆ ಹೊರಡಿಸಿದ್ದಾರೆ.

ನಿಯಮಗಳು

2009ರ ಆದೇಶದಡಿ ಬೆಂಗಳೂರಿನಲ್ಲಿ ಅನುಮತಿ ಪಡೆಯದೆ ಯಾವುದೇ ಪ್ರತಿಭಟನೆ, ಮೆರವಣಿಗೆ ನಡೆಸುವಂತಿಲ್ಲ

ಪ್ರತಿಭಟನೆ ಅನುಮತಿಗಾಗಿ ಅರ್ಜಿ ಹಾಗೂ 20 ರೂ. ಡಿಡಿ ಪಾವತಿಸುವುದು ಕಡ್ಡಾಯ

ಮೆರಣಿಗೆಯು ಒಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುವುದಿದ್ದಲ್ಲಿ ಸಂಬಂಧಪಟ್ಟ ಠಾಣಾ ವ್ಯಾಪ್ತಿಯ ಪೊಲೀಸ್ ಇನ್ಸ್‌ಪೆಕ್ಟರ್ ಅವರಿಗೆ ಅರ್ಜಿ ಸಲ್ಲಿಸಬೇಕು.

ಪ್ರತಿಭಟನೆ ದಿನಾಂಕ ಹೊರತುಪಡಿಸಿ ಕನಿಷ್ಠ 7ದಿನ ಮುಂಚಿತವಾಗಿ ಅನುಮತಿ ಕೋರಿ ಅರ್ಜಿಯನ್ನು ಸಲ್ಲಿಸಬೇಕಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News