7 ನಿಯಮ ಉಲ್ಲಂಘಿಸಿದ ಲಾರಿ ಚಾಲಕನಿಗೆ 6 ಲಕ್ಷ ರೂ ದಂಡ: ಆದರೆ…

Update: 2019-09-14 14:36 GMT

 ಭುವನೇಶ್ವರ, ಸೆ.14: ಒಡಿಶಾದ ಸಂಬಲ್ಪುರದಲ್ಲಿ ಲಾರಿ ಚಾಲಕನೊಬ್ಬ ಏಳು ಸಾರಿಗೆ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಆತನಿಗೆ ಬರೋಬ್ಬರಿ 6.53 ರೂ. ದಂಡ ವಿಧಿಸಲಾಗಿದೆ. ಗಮನಾರ್ಹವೆಂದರೆ, ಇದು ಹೊಸ ಮೋಟಾರ್ ವಾಹನ ಕಾಯ್ದೆ ಜಾರಿಗೆ ಬರುವುದಕ್ಕೂ ಮುಂಚೆ ನಡೆದ ವಿದ್ಯಮಾನ. ಹೊಸ ಕಾಯ್ದೆ ಸೆ.1ರಿಂದ ಜಾರಿಗೆ ಬಂದಿದ್ದರೆ ಈ ಘಟನೆ ಆಗಸ್ಟ್ 10ರಂದು ನಡೆದಿದೆ. ಲಾರಿ ಚಾಲಕ ದಿಲೀಪ್ ಕಾರ್ತ ಮತ್ತು ಲಾರಿ ಮಾಲಕ ಶೈಲೇಶ್ ಶಂಕರಲಾಲ್ ಗುಪ್ತರಿಗೆ ಸಂಪಲ್ಪುರ ಆರ್‌ಟಿಒ ಕಚೇರಿ 6.53 ಲಕ್ಷ ರೂ. ದಂಡ ವಿಧಿಸಿದ ಚಲನ್ ನೀಡಿದೆ. ಇದರಲ್ಲಿ 6,40,500 ರೂ. ಕಳೆದ ಐದು ವರ್ಷದಿಂದ (2014ರ ಜುಲೈ 21ರಿಂದ 2019ರ ಸೆ.30ರವರೆಗೆ) ರಸ್ತೆ ತೆರಿಗೆ ಪಾವತಿಸದ್ದಕ್ಕೆ ದಂಡ. ಪರ್ಮಿಟ್ ಇಲ್ಲದೆ ವಾಹನ ಬಳಸಿದ್ದಕ್ಕೆ 5000 ರೂ. ದಂಡ, ವಿಮೆ ಇಲ್ಲದೆ ವಾಹನ ಚಲಾಯಿಸಿದ್ದಕ್ಕೆ 1000 ರೂ. ದಂಡ, ಸರಕು ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸಿದ್ದಕ್ಕೆ 5000 ರೂ. ದಂಡ , ನಿಲ್ಲಿಸುವ ಸೂಚನೆ ಪಾಲಿಸದ್ದಕ್ಕೆ 500 ರೂ, ವಾಯು ಮಾಲಿನ್ಯ ತಪಾಸಣೆ ಮಾಡದಿದ್ದಕ್ಕೆ 1000 ರೂ ದಂಡ ವಿಧಿಸಲಾಗಿದೆ. ಜೊತೆಗೆ, ವಾಹನದ ಮಾಲಕನ ಮೇಲೆ ಸಾಮಾನ್ಯ ಅಪರಾಧಕ್ಕೆ 100 ರೂ. ದಂಡವನ್ನೂ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News