ಇಂದು ಮೊಹಾಲಿಯಲ್ಲಿ ಭಾರತ-ಆಫ್ರಿಕಾ 2ನೇ ಟ್ವೆಂಟಿ-20

Update: 2019-09-17 18:34 GMT

ಮೊಹಾಲಿ, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಟ್ವೆಂಟಿ-20 ಕ್ರಿಕೆಟ್ ಸರಣಿಯ ಎರಡನೇ ಪಂದ್ಯ ಮೊಹಾಲಿಯಲ್ಲಿ ಬುಧವಾರ ನಡೆಯಲಿದೆ.

ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಧರ್ಮಶಾಲಾದಲ್ಲಿ ಮಳೆಯಿಂದಾಗಿ ಕೊಚ್ಚಿ ಹೋಗಿತ್ತು. ಎರಡನೇ ಪಂದ್ಯಕ್ಕೆ ಭಾರತದ ತಯಾರಿ ನಡೆದಿದೆ.

 ಟ್ವೆಂಟಿ-20 ವಿಶ್ವಕಪ್‌ಗೆ ಇನ್ನು 12 ತಿಂಗಳು ಬಾಕಿ ಉಳಿದಿದೆ.ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಈಗಾಗಲೇ ಇದಕ್ಕಾಗಿ ತಯಾರಿ ಆರಂಭಿಸಿದ್ದಾರೆ. ಯುವ ಆಟಗಾರರ ಸಮರ್ಥ ತಂಡವನ್ನು ಕಟ್ಟಲು ನೋಡುತ್ತಿದ್ದಾರೆ.

ಈಗ ತಂಡದಲ್ಲಿರುವ ಯುವ ಆಟಗಾರರ ಬಗ್ಗೆ ನಾಯಕ ಕೊಹ್ಲಿ ಅಪಾರ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಯುವ ಆಟಗಾರರ ಪೈಕಿ 21ರ ಹರೆಯದ ರಿಷಭ್ ಪಂತ್ ಒಬ್ಬರು. 2017ರಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಪಂತ್ ಟೆಸ್ಟ್ ಹಾಗೂ ಟ್ವೆಂಟಿ-20ಯಲ್ಲಿ ಮಿಂಚಿದ್ದಾರೆ. ಇದೀಗ ಅವರ ಮೇಲೆ ಭರವಸೆ ಇರಿಸಲಾಗಿದೆ. ಪಂತ್ ಅವರು ಮಹೇಂದ್ರ ಸಿಂಗ್ ಧೋನಿ ಉತ್ತರಾಧಿಕಾರಿಯಾಗಿ ರೂಪುಗೊಳ್ಳುತ್ತಿದ್ದಾರೆ. ಪಂತ್ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟ್ರಿನಾಡ್‌ನಲ್ಲಿ ನಡೆ ದ ಪಂದ್ಯದಲ್ಲಿ ಮೊದಲ ಎಸೆತದಲ್ಲಿ ಔಟಾಗಿ ಪೆವಿಲಿಯನ್ ಸೇರಿದ್ದರು. ಹೀಗಿದ್ದರೂ ಕೋಚ್ ರವಿ ಶಾಸ್ತ್ರಿ ಅವರ ಮೇಲೆ ನಂಬಿಕೆ ಇಟ್ಟಿದ್ದಾರೆ. ಪಂತ್ ಚೆನ್ನಾಗಿ ಆಡುವುದನ್ನು ನೋಡಲಿದ್ದೀರಿ ಎಂದು ಹೇಳಿದ್ದರು. ಧರ್ಮಶಾಲಾದಲ್ಲಿ ಪಂತ್ ನೆಟ್ ಪ್ರಾಕ್ಟೀಸ್ ವೇಳೆ ಚೆನ್ನಾಗಿ ಆಡುವ ನಿರೀಕ್ಷೆ ಮೂಡಿಸಿದ್ದಾರೆ.

  ಲೆಗ್ ಸ್ಪಿನ್ನರ್ ರಾಹುಲ್ ಚಹಾರ್ ಮತ್ತು ವಾಷಿಂಗ್ಟನ್ ಸುಂದರ್ ಇಬ್ಬರನ್ನು ಕುಲ್‌ದೀಪ್ ಯಾದವ್ ಮತ್ತು ಯಜುವೇಂದ್ರ ಚಹಾಲ್ ಬದಲಿಗೆ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಮಧ್ಯಮ ಸರದಿಯಲ್ಲಿ ಆಡಲಿರುವ ಶ್ರೇಯಸ್ ಅಯ್ಯರ್ ಮತ್ತು ಮನೀಷ್ ಪಾಂಡೆ ಮತ್ತೆ ತಂಡಕ್ಕೆ ವಾಪಸಾಗಿದ್ದಾರೆ. ಶಿಖರ್ ಧವನ್‌ಗೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಅವಕಾಶ ಸಿಗಲಿದೆ. ಚೊಚ್ಚಲ ಟೆಸ್ ್ಟನಲ್ಲಿ 187 ರನ್ ಸಿಡಿಸಿದ್ದ ಧವನ್ ಕಳೆದ ಮಾರ್ಚ್‌ನಲ್ಲಿ ಆಸ್ಟ್ರೇಲಿಯದ ವಿರುದ್ಧ 143 ರನ್ ಗಳಿಸಿದ್ದರು.

ದಕ್ಷಿಣ ಆಫ್ರಿಕಾ ತಂಡಕ್ಕೆ ಭಾರತದ ನೆಲದಲ್ಲಿ ಭಾರತ ತಂಡವನ್ನು ಮಣಿಸುವುದು ಕಷ್ಟ ಸಾಧ್ಯ. ಕಾಗಿಸೊ ರಬಾಡ ನೇತೃತ್ವದ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ನಾಯಕ ವಿರಾಟ್ ಕೊಹ್ಲಿ 2016ರ ಮಾರ್ಚ್‌ನಲ್ಲಿ ಆಸ್ಟ್ರೇಲಿಯದ ವಿರುದ್ಧ ಇಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಅವರ ಬ್ಯಾಟಿಂಗ್ ನೆರವಿನಲ್ಲಿ

ಭಾರತ ಸೆಮಿಫೈನಲ್ ತಲುಪಿತ್ತು.

ಭಾರತ: ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮ, ಶಿಖರ್ ಧವನ್, ಲೋಕೇಶ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಭ್ ಪಂತ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಕೃನಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ರಾಹುಲ್ ಚಹಾರ್, ಖಲೀಲ್ ಅಹ್ಮದ್, ದೀಪಕ್ ಚಹಾರ್, ನವ್‌ದೀಪ್ ಸೈನಿ.

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್(ನಾಯಕ), ರಾಸೈ ವ್ಯಾನ್ ಡೆರ್ ಡುಸೆನ್(ಉಪನಾಯಕ), ತೆಂಬಾ ಬಹುಮಾ, ಜೂನಿಯರ್ ಡಾಲಾ, ಬಿಜೊರ್ನ್ ಫಾರ್ಟುನ್, ಬೆಯುರಿನ್ ಹೆನ್ರಿಕ್ಸ್, ರೆಝಾ ಹೆನ್ರಿಕ್ಸ್, ಡೇವಿಡ್ ಮಿಲ್ಲರ್, ಆ್ಯಂರಿಚ್ ನೋರ್ಟ್ಜೆ,ಆ್ಯಂಡ್ಲೆ ಫೆಹ್ಲುಕ್ವಾಯೊ, ಡ್ವಾಯ್ನೆ ಪ್ರಿಟೋರಿಯಸ್, ಕಾಗಿಸೊ ರಬಾಡ, ಟ್ಯಾಬ್ರಿಯಝ್ ಶಂಶಿ , ಜಾರ್ಜ್ ಲಿಂಡೆ.

ಪಂದ್ಯದ ಸಮಯ:

ರಾತ್ರಿ 7:00 ಗಂಟೆಗೆ ಆರಂಭ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News