'ಗೃಹ' ಇಲ್ಲದ ಗೃಹಖಾತೆ ರಾಜ್ಯ ಸಚಿವ!

Update: 2019-09-20 04:27 GMT

ಹೊಸದಿಲ್ಲಿ, ಸೆ.20: ಕೇಂದ್ರದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಕಳೆದರೂ, ಗೃಹಖಾತೆ ರಾಜ್ಯ ಸಚಿವ ಜಿ.ಕೆ.ರೆಡ್ಡಿಯವರಿಗೆ ಮಾತ್ರ ಇನ್ನೂ ಮನೆಭಾಗ್ಯ ಸಿಕ್ಕಿಲ್ಲ. ಆಂಧ್ರ ಭವನದಿಂದಲೇ ಅವರು ತಮ್ಮ ಕೆಲಸ ಕಾರ್ಯಗಳನ್ನು ನಿಭಾಯಿಸುತ್ತಿದ್ದಾರೆ. ಹಳೆಯ ಸಚಿವರು ಇನ್ನೂ ತಮಗೆ ನೀಡಲಾದ ಅಧಿಕೃತ ಬಂಗಲೆಗಳಿಗೇ ಅಂಟಿಕೊಂಡಿರುವುದು ಇದಕ್ಕೆ ಕಾರಣ. ರೆಡ್ಡಿಯವರಿಗೆ ಒಂದಲ್ಲ; ಎರಡು ಮನೆಗಳನ್ನು ಹಂಚಿಕೆ ಮಾಡಲಾಗಿದೆ; ಆದರೆ ನಾಲ್ಕು ತಿಂಗಳು ಕಳೆದರೂ ಹಂಚಿಕೆಯಾದ ಮನೆ ಪ್ರವೇಶ ಸಾಧ್ಯವಾಗಿಲ್ಲ!

ನಿಯಮಾವಳಿಗಳ ಪ್ರಕಾರ, ಮಾಜಿ ಸಂಸದರು ಲೋಕಸಭೆ ವಿಸರ್ಜನೆಯಾಗಿ ಒಂದು ತಿಂಗಳ ಒಳಗಾಗಿ ತಮ್ಮ ಬಂಗ್ಲೆಗಳನ್ನು ಖಾಲಿ ಮಾಡಬೇಕು. ಮೇ 25ರಂದು ಲೋಕಸಭೆ ವಿಸರ್ಜನೆಯಾಗಿದ್ದು, ಜೂನ್ 25ರ ಒಳಗಾಗಿ ಮಾಜಿ ಸಂಸದರು ಮನೆಗಳನ್ನು ತೆರವು ಮಾಡಬೇಕಿತ್ತು. ಆದರೆ ಇಂದಿಗೂ ಹೊಸ ಸಂಸದರು ತಾತ್ಕಾಲಿಕ ವಸತಿ ವ್ಯವಸ್ಥೆಯಲ್ಲೇ ಕಳೆಯುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News