ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಿ-20 ಕ್ರಿಕೆಟ್ ಪಂದ್ಯ: ಬಿಎಂಟಿಸಿಯಿಂದ ಹೆಚ್ಚುವರಿ ಬಸ್ ವ್ಯವಸ್ಥೆ

Update: 2019-09-20 17:06 GMT

ಬೆಂಗಳೂರು, ಸೆ. 20: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆ.22ರ ರವಿವಾರ ಟಿ-20 ಕ್ರಿಕೆಟ್ ಪಂದ್ಯಾವಳಿ ಹಿನ್ನೆಲೆಯಲ್ಲಿ ಪಂದ್ಯ ವೀಕ್ಷಣೆಗೆ ಬಂದು-ಹೋಗುವ ಪ್ರೇಕ್ಷಕರ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಟಿ-20 ಪಂದ್ಯಾವಳಿ ಸೆ.22ರ ಸಂಜೆ 7ಗಂಟೆಗೆ ನಡೆಯಲಿದ್ದು, ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲವಾಗುವಂತೆ ನಗರದ ವಿವಿಧ ಭಾಗಗಳಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. (ಪ್ರಯಾಣಿಕರು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹತ್ತಿರದ ನಿಲುಗಡೆಯಲ್ಲಿ ಇಳಿಯುವುದು).

ಪಂದ್ಯ ಮುಗಿದ ನಂತರ ಕ್ರೀಡಾಂಗಣದಿಂದ (ರಾತ್ರಿ 11:30ಕ್ಕೆ) ಮನೆಗೆ ತೆರಳಲು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಯಾಣಿಕರ ಸಂಚಾರದ ಒತ್ತಡಕ್ಕನುಗುಣವಾಗಿ ಚೀಟಿ ವಿತರಣೆ ಆಧಾರದ ಮೇಲೆ ಹೆಚ್ಚುವರಿ ಬಸ್ಸು ವ್ಯವಸ್ಥೆ ಮಾಡಲಾಗಿದೆ.

ಮಾರ್ಗ: ಎಸ್‌ಬಿಎಸ್-1ಕೆ ಶಿವಾಜಿನಗರ-ಕಾಡುಗೋಡಿ ಬಸ್ ನಿಲ್ದಾಣ, ಜಿ-2 ಮೆಯೋಹಾಲ್-ಸರ್ಜಾಪುರ, ಜಿ-3 ಬ್ರಿಗೇಡ್ ರಸ್ತೆ- ಎಲೆಕ್ಟ್ರಾನಿಕ್ ಸಿಟಿ, ಜಿ-4 ಬ್ರಿಗೇಡ್ ರಸ್ತೆ-ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್, ಜಿ-6ಶಾಂತಿನಗರ ಬಸ್ ನಿಲ್ದಾಣ-ಕೆಂಗೇರಿ, ಜಿ-7 ಕೆಂಪೇಗೌಡ ಬಸ್ ನಿಲ್ದಾಣ ಜನಪ್ರಿಯ ಟೌನ್‌ಶಿಪ್, ಜಿ-8 ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ-ನೆಲಮಂಗಲ, ಜಿ-9 ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣ-ಯಲಹಂಕ 5ನೇ ಹಂತ, ಜಿ-10 ಕೆ.ಆರ್.ಮಾರುಕಟ್ಟೆ-ಆರ್.ಕೆ. ಹೆಗಡೆ ನಗರ, ಜಿ-11 ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣ-ಬಾಗಲೂರು ಮಾರ್ಗದಲ್ಲಿ ಬಸ್ ಸಂಚಾರ ಮಾಡಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News