ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನಿಗೆ ದಂಡ !

Update: 2019-09-21 05:02 GMT

ನೊಯ್ಡ, ಸೆ.21: ಬಸ್‌ ಚಾಲಕ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಸಾರಿಗೆ ಅಧಿಕಾರಿಗಳು  500 ರೂ. ದಂಡ ವಿಧಿಸಿದ್ದಾರೆ ಎಂದು ನೊಯ್ಡಾದ ಖಾಸಗಿ ಬಸ್‌ನ ಮಾಲಕರೊಬ್ಬರು ದೂರಿದ್ದಾರೆ.

ಆನ್‌ಲೈನ್ ಚಲನ್‌ನ್ನು ಸೆಪ್ಟಂಬರ್ 11 ರಂದು ಸಿದ್ದಪಡಿಸಲಾಗಿದ್ದು, ನನ್ನ ಉದ್ಯೋಗಿಯೊಬ್ಬ ಈ ಅಂಶವನ್ನು ಶುಕ್ರವಾರ ಪರಿಶೀಲಿಸಿದ್ದ. ಅಗತ್ಯವಿದ್ದರೆ ಈ ದಂಡ ಹಾಕಿದ ವಿಚಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವೆ ಎಂದು ಬಸ್ ಮಾಲಕ ನಿರಾಂಕರ್ ಸಿಂಗ್ ಹೇಳಿದ್ದಾರೆ.

ಇಂತಹ ತಪ್ಪುಗಳು ಸಾರಿಗೆ ಇಲಾಖೆಯಲ್ಲಿ ಆಗುತ್ತಿರುವುದಕ್ಕೆ ನನಗೆ ಆತಂಕವಾಗುತ್ತಿದೆ. ಇಂತಹ ಬೇಜವಾಬ್ದಾರಿ ಇಲಾಖೆಯ ಕೆಲಸದ ಬಗ್ಗೆ ಪ್ರಶ್ನೆ ಉದ್ಭವವಾಗಿದೆ. ಪ್ರತಿದಿನ ನೀಡುವ ಇತರ ನೂರಾರು ಚಲನ್‌ಗಳ ಅಸಲೀತನದ ಕುರಿತು ಅಚ್ಚರಿಯಾಗುತ್ತದೆ. ನಾನು ಈ ವಿಚಾರವನ್ನು ಅಧಿಕಾರಿಗಳ ಗಮನಕ್ಕೆ ತರುತ್ತೇನೆ. ಅವಶ್ಯಕತೆ ಇದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇನೆ’’ ಎಂದು ಸಿಂಗ್ ತಿಳಿಸಿದರು.

‘‘ಚಲನ್‌ನ್ನು ಸಾರಿಗೆ ಅಧಿಕಾರಿಗಳು ನೀಡಿದ್ದಾರೆ. ನೊಯ್ಡಾ ಟ್ರಾಫಿಕ್ ಪೊಲೀಸರು ಇದನ್ನು ನೀಡಿಲ್ಲ. ಎಲ್ಲಿ ತಪ್ಪಾಗಿದೆ ಎಂಬ ಕುರಿತು ಗಮನ ಹರಿಸುತ್ತೇವೆ. ತಪ್ಪಾಗಿದ್ದರೆ ತಿದ್ದಿಕೊಳ್ಳುತ್ತೇವೆ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ವೇಳೆ ನಾವು ಸೀಟ್ ಬೆಲ್ಟ್ ಹಾಕದೆ ಇದ್ದಿರುವುದಕ್ಕೆ ದಂಡ ಹೇರಿದ್ದರೆ, ಹೆಲ್ಮೆಟ್ ಬದಲಿಗೆ ಸೀಟ್‌ಬೆಲ್ಟ್ ಎಂದು ಬರೆಯಬೇಕಾಗಿತ್ತು. ನಮ್ಮ ಕಡೆಯಿಂದ ಏನೂ ತಪ್ಪಾಗಿಲ್ಲ. ಆದಾಗ್ಯೂ ನಾವು ದಂಡ ಕಟ್ಟಿದ್ದೇವೆ. ಇದು ಅಸಲಿ ಚಲನ್ ಆಗಿರಬೇಕಾಗಿತ್ತು’’ಎಂದು ಸಿಂಗ್ ಹೇಳಿದ್ದಾರೆ.

ಸಿಂಗ್ ಬಳಿ 40ರಿಂದ 50 ಬಸ್‌ಗಳಿದ್ದು, ಈ ಹಿಂದೆ ಇವರ ಬಸ್‌ಗಳಿಗೆ ಸೀಟ್ ಬೆಲ್ಟ್ ನಿಯಮ ಉಲ್ಲಂಘಿಸಿರುವುದಕ್ಕೆ 4 ಬಾರಿ ದಂಡ ವಿಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News