ಭಾರಿ ಮಳೆ: ಉತ್ತರಪ್ರದೇಶ , ಬಿಹಾರದಲ್ಲಿ 50 ಕ್ಕೂ ಹೆಚ್ಚು ಸಾವು

Update: 2019-09-29 06:54 GMT

ಹೊಸದಿಲ್ಲಿ, ಸೆ.29:  ಬಿಹಾರ, ಉತ್ತರಪ್ರದೇಶ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಉತ್ತರ ಪ್ರದೇಶದಲ್ಲಿ ಮಾತ್ರ 50 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಬಿಹಾರದಲ್ಲಿ ರಾಜ್ಯ ರಾಜಧಾನಿ ಪಾಟ್ನಾ ಮತ್ತು ಇತರ ಪ್ರದೇಶಗಳ ಬೀದಿಗಳು ಜಲಾವೃತವಾಗಿದ್ದು, ಇಬ್ಬರು ಮಂತ್ರಿಗಳ ನಿವಾಸಗಳು ಜಲಾವೃತಗೊಂಡಿವೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆ, ರೈಲ್ವೆ ಸಂಚಾರಕ್ಕೆ ಧಕ್ಕೆ ಉಂಟಾಗಿದೆ.   ಶುಕ್ರವಾರದಿಂದ ರಾಜ್ಯದ ಹಲವಾರು ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಸೆಪ್ಟೆಂಬರ್ 30 ರವರೆಗೆ ನಗರದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಶನಿವಾರ 12 ರೈಲುಗಳನ್ನು ರದ್ದುಗೊಳಿಸಲಾಗಿದ್ದು, ಮಂಗಳವಾರದವರೆಗೆ ಎಲ್ಲಾ ಶಾಲೆಗಳನ್ನು ಮುಚ್ಚಲು ಸರ್ಕಾರ ಆದೇಶಿಸಿದೆ.

ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ, ರಸ್ತೆ ನಿರ್ಮಾಣ ಸಚಿವ ನಂದ್ ಕಿಶೋರ್ ಯಾದವ್ ಮತ್ತು ಬಿಜೆಪಿ ಸಂಸದ ರಾಜೀವ್ ಪ್ರತಾಪ್ ರೂಡಿ ಅವರ ನಿವಾಸಗಳು ಮರೂನ್ ದ್ವೀಪಗಳನ್ನು ಹೋಲುತ್ತವೆ. ಪಾಟ್ನಾದ ಎರಡನೇ ಅತಿದೊಡ್ಡ ಆರೋಗ್ಯ ಸೌಲಭ್ಯವಾದ ನಳಂದ ವೈದ್ಯಕೀಯ ಕಾಲೇಜು ಆಸ್ಪತ್ರೆ ಜಲಾವೃತಗೊಂಡಿದೆ.

ನೆರೆಯ ಉತ್ತರಾಖಂಡದಲ್ಲಿ, ಹೆಮಕುಂಡ್ ಸಾಹಿಬ್‌ನ ಹಿಮಾಲಯನ್ ದೇಗುಲಕ್ಕೆ ತೆರಳುತ್ತಿದ್ದ ಪಂಜಾಬ್‌ನ ಆರು ಯಾತ್ರಿಕರು ತಮ್ಮ ವಾಹನದ ಮೇಲೆ ಬಂಡೆಕಲ್ಲು ಉರುಳಿ ಬಿದ್ದು ಮೃತಪಟ್ಟಿದ್ದಾರೆ.  ಭಾರೀ ಮಳೆಯಿಂದ ಉಂಟಾದ ಭೂಕುಸಿತದ ಹಿನ್ನೆಲೆಯಲ್ಲಿ ತೆಹ್ರಿ ಜಿಲ್ಲೆಯಲ್ಲಿ ತಮ್ಮ ವಾಹನದ ಮೇಲೆ ಬೃಹತ್ ಬಂಡೆ ಬಿದ್ದು 6 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ತಲಾ  3 ಮಂದಿ ಮಳೆಗೆ  ಬಲಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವೀಡಿಯೊ ಕಾನ್ಫರೆನ್ಸ್ ಸಭೆಯಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಶುಕ್ರವಾರದಿಂದ ರಾಜ್ಯದಲ್ಲಿ ಸರಾಸರಿ 50 ಮಿ.ಮೀ ಮಳೆಯಾಗಿದೆ .  ವೈಶಾಲಿ ಮತ್ತು ನವಾಡಾದಂತಹ ಜಿಲ್ಲೆಗಳಲ್ಲಿ 200 ಮಿ.ಮೀ. ಮಳೆಯಾಗಿದೆ.

ಅಪಾಯಕಾರಿಯಾಗಿ ಜಲಾವೃತಗೊಂಡ ಪ್ರದೇಶಗಳಿಂದ ನಿವಾಸಿಗಳನ್ನು ರಕ್ಷಿಸಲು ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿಗಳ ತಂಡವನ್ನು ಸೇವೆಗೆ ಒತ್ತಾಯಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.

ಎನ್‌ಡಿಆರ್‌ಎಫ್ ತನ್ನ 18 ತಂಡಗಳನ್ನು ಹೆಚ್ಚಿನ ಮಳೆಯಾದ ಜಿಲ್ಲೆಗಳಲ್ಲಿ ಸೇವೆಗೆ ನಿಯೋಜಿಸಿದೆ ಎಂದು ಹೇಳಿದರು.

ಪೂರ್ವ ಯುಪಿಯ ಹಲವಡೆ ರವಿವಾರ  ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News