ಅರುಣ್ ಜೇಟ್ಲಿ ಪಿಂಚಣಿ ಯಾರಿಗೆ ಸಮರ್ಪಣೆ ಗೊತ್ತೇ?

Update: 2019-10-01 03:38 GMT

ಹೊಸದಿಲ್ಲಿ, ಅ.1: ಬಿಜೆಪಿ ನೇತಾರ ಹಾಗೂ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲೆಯವರ ನಿಧನದ ಬಳಿಕ ನೀಡಲಾಗುತ್ತಿರುವ ಪಿಂಚಣಿ ಹಣವನ್ನು "ತೀರಾ ಅಗತ್ಯತೆ ಇರುವ ರಾಜ್ಯಸಭಾ ಸಿಬ್ಬಂದಿ"ಯನ್ನು ಗುರುತಿಸಿ ಅವರಿಗೆ ನೀಡುವಂತೆ ಜೇಟ್ಲಿಯವರ ಪತ್ನಿ, ರಾಜ್ಯಸಭೆಯ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ.

"ಮೃತ ಸಂಸದರ ಪತ್ನಿಗೆ ನೀಡಲಾಗುವ ಪಿಂಚಣಿಯ ಬಗ್ಗೆ ಇರುವ ಪವಿತ್ರ ಭಾವನೆಯನ್ನು ಯಾವುದೇ ರೀತಿಯಲ್ಲಿ ಕೀಳಂದಾಜು ಮಾಡದೇ, ಯಾವ ಕಾರಣಕ್ಕೆ ಅರುಣ್ ಜೇಟ್ಲಿಯವರು ಪ್ರತಿಪಾದಿಸಿದ್ದರೋ ಅಂಥ ಪಿಂಚಣಿ ಮೊತ್ತವನ್ನು, ಅರುಣ್ ಜೇಟ್ಲಿಯವರು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ ಈ ಸಂಸ್ಥೆಯಲ್ಲಿರುವ ತೀರಾ ಅಗತ್ಯತೆ ಇರುವ ಅಂದರೆ ನಾಲ್ಕನೇ ದರ್ಜೆ ಸಿಬ್ಬಂದಿ ವರ್ಗದವರ ಕಲ್ಯಾಣಕ್ಕಾಗಿ ವಿನಿಯೋಗಿಸುವಂತೆ ಸಂಸತ್ತಿಗೆ ವಿನಮ್ರವಾಗಿ ವಿನಂತಿ ಮಾಡುತ್ತಿದ್ದೇನೆ" ಎಂದು ಸಂಗೀತಾ ಜೇಟ್ಲಿ ಅವರು ನಾಯ್ಡು ಅವರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ. ಅರುಣ್ ಅವರ ಅಭಿಲಾಷೆ ಕೂಡಾ ಅದೇ ಆಗಿತ್ತು ಎಂದು ದೃಢವಾಗಿ ಹೇಳಬಲ್ಲೆ ಎಂದು ಅವರು ಬಣ್ಣಿಸಿದ್ದಾರೆ.

ಪತ್ರದ ಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿಯವರಿಗೂ ಕಳುಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News