ಅಕ್ರಮ ಹಣ ವರ್ಗಾವಣೆಗೆ ತಡೆಗೆ ಕ್ರಮ: ಅಂತರ್‌ಸಚಿವಾಲಯ ಸಮನ್ವಯ ಸಮಿತಿ ರಚನೆ

Update: 2019-10-08 16:23 GMT

ಹೊಸದಿಲ್ಲಿ,ಅ.8: ಅಕ್ರಮ ಹಣ ವರ್ಗಾವಣೆಯನ್ನು ಹತ್ತಿಕ್ಕಲು ವಿವಿಧ ಸರಕಾರಿ ಇಲಾಖೆಗಳ ನಡುವೆ ಉತ್ತಮ ಸಹಕಾರಕ್ಕಾಗಿ ಕಂದಾಯ ಕಾರ್ಯದರ್ಶಿಗಳ ನೇತೃತ್ವದಲ್ಲಿ 19 ಸದಸ್ಯರ ಅಂತರ್‌ಸಚಿವಾಲಯ ಸಮನ್ವಯ ಸಮಿತಿಯೊಂದನ್ನು ಕೇಂದ್ರವು ರಚಿಸಿದೆ.

ಹಣಕಾಸು ಸೇವೆಗಳು,ಆರ್ಥಿಕ ವ್ಯವಹಾರಗಳು,ಕಾರ್ಪೊರೇಟ್ ವ್ಯವಹಾರಗಳು ಮತ್ತು ವಿದೇಶಾಂಗ ವ್ಯವಹಾರಗಳ ಇಲಾಖೆಗಳ ಕಾರ್ಯದರ್ಶಿಗಳು,ಐಬಿ,ಸೆಬಿ,ಐಆರ್‌ಡಿಎಐ,ಸಿಬಿಐಟಿಸಿ ಮತ್ತು ಸಿಬಿಡಿಟಿಗಳ ಮುಖ್ಯಸ್ಥರು,ಆರ್‌ಬಿಐ ಉಪ ಗವರ್ನರ್,ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿ,ಅಂಚೆ ಇಲಾಖೆ,ಈ.ಡಿ.,ಎನ್‌ಐಎ ಮತ್ತು ಎನ್‌ಸಿಬಿ ಇತ್ಯಾದಿ ಸಂಸ್ಥೆಗಳ ಪ್ರತಿನಿಧಿಗಳು ಸಮಿತಿಯ ಸದಸ್ಯರಲ್ಲಿ ಸೇರಿದ್ದಾರೆ.

ಸರಕಾರ,ಕಾನೂನು ಜಾರಿ ಸಂಸ್ಥೆಗಳು,ಹಣಕಾಸು ಗುಪ್ತಚರ್ಯೆ ಘಟಕ ಮತ್ತು ಇತರ ನಿಯಂತ್ರಣ ಸಂಸ್ಥೆಗಳ ನಡುವೆ ಕಾರ್ಯಾಚರಣೆ ಸಹಕಾರಕ್ಕಾಗಿ ಸಮಿತಿಯು ಶ್ರಮಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News