ಜಿಎಸ್‌ಟಿ ಆದಾಯ ಹೆಚ್ಚಳಕ್ಕೆ ಮಾರ್ಗೋಪಾಯ ಸೂಚಿಸಲು ಕೇಂದ್ರದಿಂದ ಸಮಿತಿ ರಚನೆ

Update: 2019-10-10 15:34 GMT

ಹೊಸದಿಲ್ಲಿ,ಅ.10: ಜಿಎಸ್‌ಟಿ ಆದಾಯ ಸಂಗ್ರಹ ಹೆಚ್ಚಳಕ್ಕೆ ಮಾರ್ಗೋಪಾಯಗಳನ್ನು ಸೂಚಿಸಲು ಅಧಿಕಾರಿಗಳ ಸಮಿತಿಯೊಂದನ್ನು ಕೇಂದ್ರವು ಗುರುವಾರ ರಚಿಸಿದೆ. ಸೆಪ್ಟೆಂಬರ್ ತಿಂಗಳ ಜಿಎಸ್‌ಟಿ ಸಂಗ್ರಹವು 91,916 ಕೋ.ರೂ. ಗಳಾಗಿದ್ದು,ಸತತ ಎರಡನೇ ತಿಂಗಳಿಗೆ 19 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

 ವಿವಿಧ ಸುಧಾರಣೆಗಳ ಬಗ್ಗೆ ಪರಿಶೀಲಿಸಿ ಸಲಹೆಗಳ ಸಮಗ್ರ ಪಟ್ಟಿಯೊಂದನ್ನು ಸಿದ್ಧಗೊಳಿಸುವಂತೆ ಜಿಎಸ್‌ಟಿ ಮಂಡಳಿ ಸಚಿವಾಲಯವು ತನ್ನ ಆದೇಶದಲ್ಲಿ ನೂತನ ಸಮಿತಿಗೆ ಸೂಚಿಸಿದೆ. ತನ್ನ ಪ್ರಥಮ ವರದಿಯನ್ನು 15 ದಿನಗಳಲ್ಲಿ ಸಲ್ಲಿಸುವಂತೆಯೂ ಅದು ನಿರ್ದೇಶ ನೀಡಿದೆ.

 ತೆರಿಗೆ ಪದ್ಧತಿಯಲ್ಲಿ ವ್ಯವಸ್ಥಿತ ಬದಲಾವಣೆಗಳಿಗಾಗಿ ಮಾರ್ಗಗಳು ಮತ್ತು ಸ್ವಯಂ ಅನುಪಾಲನೆಯನ್ನು ಹೆಚ್ಚಿಸಲು ಮತ್ತು ತೆರಿಗೆ ವಂಚನೆಯನ್ನು ತಡೆಯಲು ಅನುಪಾಲನೆಯ ಮೇಲೆ ನಿಗಾ ಇರಿಸಲು,ತೆರಿಗೆ ಬುನಾದಿಯನ್ನು ವಿಸ್ತರಿಸಲು ಮತ್ತು ಉತ್ತಮ ಆಡಳಿತಾತ್ಮಕ ಸಮನ್ವಯಕ್ಕಾಗಿ ಕ್ರಮಗಳನ್ನು ಹಾಗೂ ಕಾನೂನಿನಲ್ಲಿ ಅಗತ್ಯವಾಗಿರುವ ಸುಸಂಗತ ಬದಲಾವಣೆಗಳನ್ನು ಸೂಚಿಸುವಂತೆ ಆದೇಶದಲ್ಲಿ ಪಟ್ಟಿ ಮಾಡಲಾಗಿರುವ ಆರು ಅಂಶಗಳ ಅಜೆಂಡಾದಲ್ಲಿ ತಿಳಿಸಲಾಗಿದೆ.

ಮಹಾರಾಷ್ಟ್ರ,ತಮಿಳುನಾಡು,ಉತ್ತರ ಪ್ರದೇಶ,ಪಶ್ಚಿಮ ಬಂಗಾಳ ಮತ್ತು ಪಂಜಾಬಗಳ ತೆರಿಗೆ ಆಯುಕ್ತರನ್ನು ಸಮಿತಿಯು ಒಳಗೊಂಡಿದೆ. ಜಿಎಸ್‌ಟಿ ಮಂಡಳಿಯ ಜಂಟಿ ಕಾರ್ಯದರ್ಶಿ ಹಾಗೂ ಕಾರ್ಯಕಾರಿ ಉಪಾಧ್ಯಕ್ಷರೂ ಸಮಿತಿಯ ಸದಸ್ಯರಾಗಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News