ಮೋದಿ-ಜಿನ್‌ಪಿಂಗ್ ಶೃಂಗಸಭೆಗೆ ಮುನ್ನ ಮಾಮಲ್ಲಾಪುರಂನಲ್ಲಿ ಬಿಗಿ ಭದ್ರತೆ

Update: 2019-10-10 16:43 GMT

ಚೆನ್ನೈ.ಅ.10: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿತೀಯ ಅನೌಪಚಾರಿಕ ಶೃಂಗಸಭೆಗಾಗಿ ಅ.11-12ರಂದು ಇಲ್ಲಿಗೆ ಸಮೀಪದ ಮಾಮಲ್ಲಾಪುರಂ (ಮಹಾಬಲಿಪುರಂ)ಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಭೇಟಿಗೆ ಮುನ್ನ ಬಿಗಿ ಭದ್ರತಾ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ.

ಶೃಂಗಸಭೆ ನಡೆಯುವ ವಿಶಾಲ ಸ್ಥಳದಾದ್ಯಂತ ಭಾರತ ಮತ್ತು ಚೀನಾ ಧ್ವಜಗಳನ್ನು ಸ್ಥಾಪಿಸಲಾಗಿದೆ. ಇದರೊಂದಿಗೆ ಜಿನ್‌ಪಿಂಗ್ ಅವರ ಸ್ವಾಗತಕ್ಕಾಗಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಭರದ ಸಿದ್ಧತೆಗಳು ನಡೆಯುತ್ತಿದ್ದು,ಸಾಂಪ್ರದಾಯಿಕವಾಗಿ ತಳಿರು ತೋರಣಗಳು,ಹೂವು ಮತ್ತು ಹಣ್ಣುಗಳಿಂದ ಅಲಂಕರಿಸಲಾಗುತ್ತಿದೆ.

ತನ್ಮಧ್ಯೆ ಜಿನ್‌ಪಿಂಗ್ ಅವರನ್ನು ಚೆನ್ನೈಗೆ ಸ್ವಾಗತಿಸಲು ನಿಯೋಜಿತ 2,000ಕ್ಕೂ ಅಧಿಕ ವಿದ್ಯಾರ್ಥಿಗಳು ಗುರುವಾರ ಅವರ ಮುಖವಾಡ ಧರಿಸಿ ತಾಲೀಮು ನಡೆಸಿದರು.

ಭಾರತ-ಚೀನಾ ನಡುವೆ ಮೊದಲ ಅನೌಪಚಾರಿಕ ಶೃಂಗಸಭೆ 2018,ಎ.27-28ರಂದು ಚೀನಾದ ವುಹಾನ್‌ನಲ್ಲಿ ನಡೆದಿತ್ತು.

ಮಾಮಲ್ಲಾಪುರಂ ಶೃಂಗಸಭೆಯಲ್ಲಿ ದ್ವಿಪಕ್ಷೀಯ,ಪ್ರಾದೇಶಿಕ ಮತ್ತು ಜಾಗತಿಕ ಮಹತ್ವದ ವಿಷಯಗಳ ಬಗ್ಗೆ ಮೋದಿ-ಜಿನ್‌ಪಿಂಗ್ ಚರ್ಚಿಸಲಿದ್ದಾರೆ. ಭಾರತ-ಚೀನಾ ನಿಕಟ ಅಭಿವೃದ್ಧಿ ಪಾಲುದಾರಿಕೆಯನ್ನು ಬಲಗೊಳಿಸುವುದೂ ಸಭೆಯ ಉದ್ದೇಶವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News