ಮಹಾಬಲಿಪುರಂ ಮೋದಿ ಡಿನ್ನರ್ ನಲ್ಲಿ ಚೀನಾ ಅಧ್ಯಕ್ಷರಿಗೆ ಮಟನ್ ಬಿರಿಯಾನಿ, ಚಿಕನ್ ಖಾದ್ಯಗಳು

Update: 2019-10-12 07:23 GMT

ಚೆನ್ನೈ: ಶುಕ್ರವಾರ ಮೊದಲ ಸುತ್ತಿನ ಅನೌಪಚಾರಿಕ ಮಾತುಕತೆಗಳ ನಂತರ ಮಹಾಬಲಿಪುರಂ ದೇವಳದ ಕಲಾಕ್ಷೇತ್ರ ಫೌಂಡೇಶನ್ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ರಾತ್ರಿ ಭೋಜನ ಕೂಟದಲ್ಲಿ ತಮಿಳುನಾಡಿನ ವಿಶೇಷ ಖಾದ್ಯಗಳನ್ನು ಸವಿದರು.

ಚೀನಾದ ಅಧ್ಯಕ್ಷರಿಗೆ ಉಣಬಡಿಸಲಾದ ಮಾಂಸಾಹಾರ ಮೆನುವಿನಲ್ಲಿ ತಮಿಳುನಾಡಿನ ಖ್ಯಾತ ಖಾದ್ಯಗಳಾದ ತಂಜಾವೂರ್ ಕೊಝಿ ಕರ್ರಿ, ಒಣ ಕೊತ್ತಂಬರಿ ಹಾಗೂ ಮಸಾಲೆಗಳೊಂದಿಗೆ ಬೇಯಿಸಲಾದ ಮಾಂಸದ ತುಂಡುಗಳ ಪದಾರ್ಥ-ಯೆರಚಿ ಘೆಟ್ಟಿ ಕೊಝಂಬು, ಅರಚವಿತ್ತ ಸಾಂಬಾರ್, ಮಾಂಸ ಬಿರಿಯಾನಿ,  ಆಂಧ್ರ ಶೈಲಿಯಲ್ಲಿ ಬೇಯಿಸಿದ ಮಾಂಸ ಹಾಗೂ ಕೇರಳದ ವಿಶೇಷ ಖಾದ್ಯ ಮಟನ್ ಉಲರ್ತಿಯಧು ಕೂಡ ಸೇರಿದ್ದವು.

ಸಸ್ಯಾಹಾರಿ ಖಾದ್ಯಗಳಲ್ಲಿ ಥಕ್ಕಳಿ ರಸಂ, ಕೀರೈ ವಡೈ, ಕಡಲೈ ಕುರುಮ, ಪೂಸ್ನಿಕ್ಕೈ ಮೋರ್ ಕರ್ರಿ, ಬೀಟ್‍ರೂಟ್-ಗೊಂಗುರ ಚಾಪ್ ಸೇರಿದ್ದವು. ಇಬ್ಬರು ನಾಯಕರೂ ಮೂರು ಸಹಿ ತಿಂಡಿಗಳಾದ ಕೇರಳದ ಅಡ ಪ್ರಧಮನ್, ಕವನರಿಸಿ ಹಲ್ವ ಹಾಗೂ ತಮಿಳುನಾಡಿನ ಮಾವಿನ ಹಣ್ಣು, ಹಲಸಿನ ಹಣ್ಣ ಹಾಗೂ ಬಾಳೆಹಣ್ಣು ಬಳಸಿ ತಯಾರಿಸಲಾದ ಮುಕ್ಕನಿ ಐಸ್ ಕ್ರೀಂ ಸವಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News