ವೇತನ ಪರಿಷ್ಕರಣೆಗೆ ಆಗ್ರಹಿಸಿ 20 ಸಾವಿರಕ್ಕೂ ಹೆಚ್ಚು ಎಚ್‍ಎಎಲ್ ಉದ್ಯೋಗಿಗಳ ಮುಷ್ಕರ

Update: 2019-10-14 09:43 GMT

ಬೆಂಗಳೂರು, ಅ.14: ವೇತನ ಪರಿಷ್ಕರಣೆ ಸಹಿತ ತಮ್ಮ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‍ಎಎಲ್) ಉದ್ಯೋಗಿಗಳು ಇಂದು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ದೇಶದಲ್ಲಿರುವ ಎಚ್‍ಎಎಲ್‍ ನ ಎಲ್ಲಾ ಒಂಬತ್ತು ಘಟಕಗಳ ಉದ್ಯೋಗಿಗಳು ಈ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.

ಆಡಳಿತದೊಂದಿಗೆ ನಡೆಸಿದ ಮಾತುಕತೆಗಳು ವಿಫಲಗೊಂಡ ನಂತರ ಅಖಿಲ ಭಾರತ ಎಚ್‍ಎಎಲ್ ಟ್ರೇಡ್ ಯೂನಿಯನ್ ಗಳು ಸಮನ್ವಯ ಸಮಿತಿ ರವಿವಾರ ಮುಷ್ಕರಕ್ಕೆ ಕರೆ ನೀಡಿತ್ತು. ದೇಶಾದ್ಯಂತ ಸುಮಾರು 20,000ಕ್ಕೂ ಎಚ್‍ಎಎಲ್ ಉದ್ಯೋಗಿಗಳು ಮುಷ್ಕರದಲ್ಲಿ ಪಾಲ್ಗೊಂಡಿದ್ದು, ಎಲ್ಲಾ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ಸಮಿತಿಯ ಮುಖ್ಯ ಸಂಚಾಲಕ ಸೂರ್ಯದೇವರ ಚಂದ್ರಶೇಖರ್ ಹೇಳಿದರು.

ಕಂಪೆನಿಯು ಕಾರ್ಮಿಕರು ಹಾಗೂ ಅಧಿಕಾರಿಗಳ ನಡುವೆ ತಾರತಮ್ಯ ತೋರುತ್ತಿದೆ ಹಾಗೂ ತನ್ನ ಸಮರ್ಥನೀಯ ಬೇಡಿಕೆಗಳನ್ನು ಈಡೇರಿಸಲು  ವಿಫಲವಾಗಿದೆ ಎಂದು ಸಮಿತಿ ಆರೋಪಿಸಿದೆ. ಜನವರಿ 1, 2017ರಂದು ಜಾರಿಗೊಳ್ಳಬೇಕಿದ್ದ ಹೊಸ ವೇತನ ಶ್ರೇಣಿಯ ಕುರಿತಂತೆ ಆಡಳಿತ ಹಾಗೂ ಉದ್ಯೋಗಿಗಳ ಯೂನಿಯನ್ ನಡುವೆ 2016ರಿಂದಲೇ ಮಾತುಕತೆಗಳು  ನಡೆಯುತ್ತಿದ್ದರೂ ಇಲ್ಲಿಯ ತನಕ ಯಾವುದೇ ಸಹಮತಕ್ಕೆ ಬರಲಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News