ಆರ್.ಬಿ.ಐ 1,000 ರೂ. ಮುಖಬೆಲೆಯ ಹೊಸ ನೋಟು ಬಿಡುಗಡೆಗೊಳಿಸುತ್ತಿದೆಯೇ ?

Update: 2019-10-17 07:32 GMT

ಹೊಸದಿಲ್ಲಿ : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ  ಸಂದೇಶವೊಂದು ಭಾರತೀಯ ರಿಸರ್ವ್ ಬ್ಯಾಂಕ್ ಒಂದು ಸಾವಿರ ರೂಪಾಯಿ ಮುಖಬೆಲೆಯ ಹೊಸ ಕರೆನ್ಸಿ ನೋಟುಗಳನ್ನು ಬಿಡುಗಡೆಗೊಳಿಸಿದೆ ಎಂದು ಹೇಳಿಕೊಂಡಿದೆ.

ಹೊಸತಾಗಿ ಬಿಡುಗಡೆಯಾಗಿದೆಯೆಂದು ಹೇಳಲಾದ ಈ ನೋಟಿನಲ್ಲಿ ಮಹಾತ್ಮ ಗಾಂಧಿಯ ಚಿತ್ರ, ಜತೆಗೆ ಬಲ ಬದಿಯಲ್ಲಿ ಹಸಿರು ಗೆರೆಯಿದೆ. ಹಲವು ಮಂದಿ ಸಾಮಾಜಿಕ ಜಾಲತಾಣಿಗರು ಈ ನೋಟಿನ ಚಿತ್ರವನ್ನು ಶೇರ್ ಮಾಡಿದ್ದಾರೆ.

ಅಸಲಿಯತ್ತೇನು ?

ಈ ನೋಟಿನ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರ ಬಲಬದಿಯ ಮೇಲಿನ ಭಾಗದಲ್ಲಿ ನೀಲಿ ಬಣ್ಣದಲ್ಲಿ 'ಆರ್ಟಿಸ್ಟಿಕ್ ಇಮ್ಯಾಜಿನೇಶನ್' (ಕಲಾತ್ಮಕ ಪರಿಕಲ್ಪನೆ) ಎಂದು ಬರೆಯಲಾಗಿದೆ. ಇದರಿಂದ ಈ ನೋಟಿನ ಚಿತ್ರ ಯಾವುದೋ ಕಲಾವಿದ ಕೈಚಳಕ ಎಂಬುದು ಸ್ಪಷ್ಟವಾಗುತ್ತದೆ.

ರಿಸರ್ವ್ ಬ್ಯಾಂಕ್ ನ ಅಧಿಕೃತ ವೆಬ್ ಸೈಟ್‍ನಲ್ಲೂ ಹೊಸ 1000 ರೂ. ಮುಖಬೆಲೆಯ ಕರೆನ್ಸಿ ನೋಟಿನ  ಬಿಡುಗಡೆಯ ಕುರಿತು ಯಾವುದೇ ಮಾಹಿತಿಯಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News