‘ಹಝ್ರತ್ ಯಕೀನ್ ಶಾ ವಲಿ ದರ್ಗಾ ಉರೂಸ್’

Update: 2019-10-17 17:20 GMT

ಬೆಂಗಳೂರು, ಅ.17: ನಗರದ ಅರಮನೆ ರಸ್ತೆಯಲ್ಲಿರುವ ಹಝ್ರತ್ ಸೈಯ್ಯದನಾ ಯಕೀನ್ ಶಾ ವಲಿ(ರಅ)ದರ್ಗಾದ ಉರೂಸ್ ಮತ್ತು ಗಂಧ ಅ.21, 22 ಹಾಗೂ 23ರಂದು ಮೂರು ದಿನಗಳ ಕಾಲ ನಡೆಯಲಿದೆ ಎಮದು ದರ್ಗಾ ಸಮಿತಿಯ ಕಾರ್ಯದರ್ಶಿ ಜಿ.ಎಸ್.ಶಂಶೀರ್ ಬೇಗ್ ತಿಳಿಸಿದ್ದಾರೆ.

ಗುರುವಾರ ದರ್ಗಾ ಆವರಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅ.21ರಂದು ನಡೆಯಲಿರುವ ನೂರಾನಿ ಸಂದಲ್ ಕಾರ್ಯಕ್ರಮದಲ್ಲಿ 5-6 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. 22ರಂದು ಮಲ್ಲೇಶ್ವರಂನಲ್ಲಿರುವ ಮುಹಮ್ಮದನ್ ಬ್ಲಾಕ್‌ನಿಂದ ಗಂಧ ಇಲ್ಲಿಗೆ ಮೆರವಣಿಗೆ ಮೂಲಕ ತರಲಾಗುತ್ತದೆ ಎಂದರು.

23ರಂದು ಫಾತೇಹಾ ಕಾರ್ಯಕ್ರಮ ಇರುತ್ತದೆ. ಇದರಲ್ಲಿ ಕನಿಷ್ಠ 10-12 ಸಾವಿರ ಮಂದಿ ಪಾಲ್ಗೊಳ್ಳುತ್ತಾರೆ. ದರ್ಗಾಗೆ ಆಗಮಿಸುವವರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಜನಸಾಮಾನ್ಯರಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸಂಚಾರ ಪೊಲೀಸರು, ನಾಗರಿಕ ಪೊಲೀಸರ ಜೊತೆಯೂ ಮಾತುಕತೆ ನಡೆಸಲಾಗಿದೆ ಎಂದು ಶಂಶೀರ್ ಬೇಗ್ ಹೇಳಿದರು.

ಸರಕಾರದಿಂದ ಪಾವತಿಯಾಗದ ಹಣ: ತಿರುಮೇನಹಳ್ಳಿ ಬಳಿ ನಿರ್ಮಿಸಿರುವ ರಾಜ್ಯ ಹಜ್ ಭವನದ ಭೂಮಿಯ ಒಡೆತನವು ಹಝ್ರತ್ ಯಕೀನ್ ಶಾ ವಲಿ ದರ್ಗಾಗೆ ಸೇರಿದ್ದು, ಈವರೆಗೆ ದರ್ಗಾ ಸಮಿತಿಗೆ ಆ ಜಾಗದ 4.50 ಕೋಟಿ ರೂ.ಪಾವತಿಯಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

 ಭೂ ಒಡೆತನಕ್ಕೆ ಸಂಬಂಧಿಸಿದ ವ್ಯಾಜ್ಯ ನ್ಯಾಯಾಲಯದ ಮೆಟ್ಟಿಲೇರಿದ್ದು, ಸರಕಾರ ವಿವಾದವನ್ನು ಕೂಡಲೆ ಬಗೆಹರಿಸಿ, ದರ್ಗಾ ಸಮಿತಿಗೆ ಬರಬೇಕಾದ ಹಣವನ್ನು ಪಾವತಿ ಮಾಡಿದರೆ ಇಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ದರ್ಗಾದ ಸಜ್ಜಾದೆ ನಶೀನ್ ಸಯ್ಯದ್ ಝಿಯಾ ಉಲ್ಲಾ ಶಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News